‘ಬಾಂಬ್‌ ಇಟ್ಟು ಸಂಚು ರೂಪಿಸಿದವರನ್ನು ಮಟ್ಟ ಹಾಕಬೇಕು’- ಯು.ಟಿ ಖಾದರ್‌

WhatsApp
Telegram
Facebook
Twitter
LinkedIn

ಬೆಳಗಾವಿ: ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು. ಇಂಥ ಕೃತ್ಯ ವೆಸಗಿದವರು ಮತ್ತು ಈ ಘಟನೆ ಹಿಂದೆ ಸಂಚು ರೂಪಿಸಿದವರನ್ನು ಮಟ್ಟ ಹಾಕಬೇಕು ಎಂದು ವಿಧಾನಸಭೆ ಅಧ್ಯಕ್ಷಯು.ಟಿ.ಖಾದರ್ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಿರ್ಭಯ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಜನರು ನೆಮ್ಮದಿಯಿಂದ ಬದುಕು ಸಾಗಿಸಬಹುದು. ಶಾಂತಿಯುತವಾದ ರಾಜ್ಯಕೆಡಿಸಲು ಯತ್ನಿಸಿದವರನ್ನು ಮಟ್ಟಹಾಕಲು ಸರ್ಕಾರ ಕ್ರಮ ವಹಿಸಿದೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ? ಅವರ ಉದ್ದೇಶವೇ ನು ಎಂಬುದು ತಿಳಿಯಬೇಕಿದೆ ಎಂದರು.

ಮುಂದೆ ಇಂಥ ಕೃತ್ಯ ಮಾಡಲು ಬೇರೆಯವರೂ ಭಯಪಡುವಂತೆ ಆರೋ ಪಿಗೆ ಶಿಕ್ಷೆ ವಿಧಿಸಬೇಕಿದೆ. ಮನುಷ್ಯತ್ವ ಹಾಗೂ ಕರುಣೆ ಇಲ್ಲದವರನ್ನು ಯಾರೂ ಸಮರ್ಥಿ ಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಯಾರೂ ರಾಜಕಾರಣ ಮಾಡಬಾರದು. ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ನಮ್ಮಲ್ಲೇ ಭಿನ್ನಾಭಿಪ್ರಾಯ ಮೂಡಿದರೆ, ದುಷ್ಕರ್ಮಿಗಳು ಇದರ ಲಾಭ ಪಡೆಯುತ್ತಾರೆ. ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ಕೊಡಬಾರದು’ ಎಂದು ನುಡಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon