ಬೆಂಗಳೂರು: ದಸರಾ ಮುಗಿದ ಬೆನ್ನಲ್ಲೇ 110 ಹಳ್ಳಿಗಳಿಗೆ ಕಾವೇರಿ ನೀರು ಸಿಗಲಿದೆ. ಕಾವೇರಿ ಐದನೇ ಹಂತ ಯೋಜನೆ ಚಾಲನೆಗೆ ಡೇಟ್ ಫಿಕ್ಸ್ ಆಗಿದ್ದು ಅಕ್ಟೋಬರ್ 16ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಜಲ ಮಂಡಳಿ 4,336 ಕೋಟಿ ರೂಪಾಯಿ ವೆಚ್ಚದ ಯೋಜನೆ ಕಾಮಗಾರಿ ಮುಗಿಸಿರುವ ಹಿನ್ನಲೆ ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ ಡಿಸಿಎಂ ಉದ್ಘಾಟನೆ ಮಾಡಲಿದ್ದಾರೆ. ವರ್ಷಗಳಿಂದ ಕಾದು ಕುಳಿತಿದ್ದ 110 ಹಳ್ಳಿಗಳ ಮನೆ ಮನೆಗೆ ಕೊನೆಗೂ ಕಾವೇರಿ ನೀರು ಲಭ್ಯವಾಗುವ ಖುಷಿಯಲ್ಲಿ ಜನರಿದ್ದಾರೆ.



























