Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ರಾಹುಲ್‌ಗಾಂಧಿ ಮದುವೆ ಕುರಿತು ಸೋನಿಯಾಗಾಂಧಿ ನಗುತ್ತಾ ಉತ್ತರಿಸಿದ್ದೇನು..?

0

ನವದೆಹಲಿ: ಇತ್ತೀಚೆಗೆ ಹರಿಯಾಣದ ಸೋನಿಪತ್‌ನ  ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ ವೇಳೆ ಸೋನಿಯಾ ಗಾಂಧಿ ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಕುರಿತು ಭರವಸೆ ನೀಡಿದ್ದರು. ಹೀಗಾಗಿ ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಹೀಗೆ ಮನೆಗೆ ಬಂದ ರೈತ ಮಹಿಳೆಯರ ಪೈಕಿ ಒಬ್ಬರು ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ ಮಾಡಲಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಕೇಳಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ’ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಇದೀಗ ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್‌ ಆಗುತ್ತಿದೆ.

ಭೋಜನ ಕೂಟದ ವೇಳೆ ಮಹಿಳೆಯರ ಜೊತೆಗೆ ಸೋನಿಯಾಗಾಂಧಿ, ಪ್ರಿಯಾಂಕಗಾಂಧಿ, ರಾಹುಲ್‌ ಗಾಂಧಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಸಿದರು‌. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ರಾಹುಲ್‌ ಹೇಳಿದ್ದಾರೆ.

ರಾಹುಲ್ ಗಾಂಧಿ ಮಧ್ಯಾಹ್ನದ ಊಟವನ್ನು ನೀಡುತ್ತಿರುವುದು, ನಿಮಗೆ ಊಟ ಇಷ್ಟವಾಯಿತೇ ಎಂದು ಕೇಳುತ್ತಿರುವುದು , ಸೋನಿಯಾ ಗಾಂಧಿ ಮಹಿಳಾ ರೈತರೊಂದಿಗೆ ನೃತ್ಯ ಮಾಡುವುದು ಸೇರಿದಂತೆ ಹಲವು ವಿಚಾರಗಳು ವಿಡಿಯೋದಲ್ಲಿ ನೋಡಬಹುದು.

Leave A Reply

Your email address will not be published.