ರುಚಿಕರವಾದ ʼಚಿಕನ್​ ಹರಿಯಾಲಿʼ ಮಾಡುವ ವಿಧಾನ

WhatsApp
Telegram
Facebook
Twitter
LinkedIn

ಬೇಕಾಗುವ ಸಾಮಗ್ರಿ:

ಚಿಕನ್​ 1 ಕೆಜಿ, ಈರುಳ್ಳಿ 4, ಎಣ್ಣೆ, ಪುದೀನಾ ಸೊಪ್ಪು 1 ಕಪ್​, ಹಸಿ ಮೆಣಸು 13, ಏಲಕ್ಕಿ 6, ಚಕ್ಕೆ 4 ಚಿಕ್ಕ ತುಂಡು, ಕಸೂರಿ ಮೇತಿ ಸ್ವಲ್ಪ,  ಜೀರಿಗೆ ಪುಡಿ ಅರ್ಧ ಚಮಚ, ಕಾರದ ಪುಡಿ 2 ಚಮಚ, ಗರಂ ಮಸಾಲಾ 2 ಚಮಚ, ಅರಿಶಿಣ 1/2 ಚಮಚ, ಮೊಸರು 1 ಕಪ್​, ಶುಂಠಿ – ಬೆಳ್ಳುಳ್ಳಿ  ಪೇಸ್ಟ್ 2 ದೊಡ್ಡ ಚಮಚ, ಕೊತ್ತಂಬರಿ ಸೊಪ್ಪು 1 ಕಪ್​, ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ಹಸಿ ಮೆಣಸನ್ನ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್​ ಮಾಡಿಕೊಳ್ಳಿ. ಈ ಮಿಶ್ರಣವನ್ನ ಚೆನ್ನಾಗಿ ತೊಳೆದುಕೊಂಡ ಚಿಕನ್​ ಪೀಸ್​ಗಳ ಜೊತೆ ಸೇರಿಸಿ ಮ್ಯಾರಿನೇಟ್​ ಮಾಡಿಡಿ. ಇದಾದ  ಬಳಿಕ ಒಂದು ಪಾತ್ರೆಯಲ್ಲಿ  ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಏಲಕ್ಕಿ, ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್​​ನ್ನು ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ .  ಇದಕ್ಕೆ ಇವಾಗ ಮ್ಯಾರಿನೇಟ್​ ಮಾಡಿಟ್ಟ ಚಿಕನ್​ ಹಾಗೂ ಕಾರದಪುಡಿ, ಗರಂ ಮಾಸಾಲಾ ಅರಿಶಿಣ, ಕಸೂರಿ ಮೇತಿ,  ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪನ್ನ ಹಾಕಿ ಚಿಕನ್ ಪೀಸ್​ಗಳು ಬೇಯುವರೆಗೂ ಒಲೆಯ ಮೇಲಿಡಿ.

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon