Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ – ಸಹ ಪ್ರಯಾಣಿಕ ಅರೆಸ್ಟ್

0

ಮುಂಬೈ: ಮುಂಬೈನಿಂದ ಗುವಾಹತಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಆರ್ಮ್‍ರೆಸ್ಟ್ ಮೇಲೆತ್ತಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.

ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿ ಗುವಾಹತಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಗೊ ವಿಮಾನಯಾನ ಕಂಪನಿ ಹೇಳಿಕೆ ನಿಡಿದೆ.

ಮುಂಬೈನಿಂದ ಹೊರಟಿದ್ದ ವಿಮಾನ ಮಧ್ಯರಾತ್ರಿ 11.45ಕ್ಕೆ ಗುವಾಹತಿಗೆ ಬಂದಿಳಿದಿದ್ದ್, ಘಟನೆಯ ಬಗ್ಗೆ ವಿವರ ನೀಡಿರುವ ಮಹಿಳೆ, “ನಾನು ಪಕ್ಕದ ಸೀಟಿನಲ್ಲಿ ಕುಳಿತಿದ್ದು, ವಿಮಾನದ ದೀಪಗಳನ್ನು ಮಬ್ಬುಗೊಳಿಸಿದ ಸಂದರ್ಭ ಆರ್ಮ್‍ರೆಸ್ಟ್ ಕೆಳಕ್ಕೆ ಮಾಡಿ ನಿದ್ದೆಗೆ ಜಾರಿದ್ದೆ. ಎಚ್ಚರವಾದಾಗ ಆರ್ಮ್‍ರೆಸ್ಟ್ ಮೇಲೆ ಎತ್ತಲಾಗಿತ್ತು ಹಾಗೂ ಪುರುಷ ಸಹ ಪ್ರಯಾಣಿಕ ತೀರಾ ಸನಿಹದಲ್ಲಿ ಕುಳಿತಿದ್ದ” ಎಂದು ಹೇಳಿದ್ದಾರೆ.

Leave A Reply

Your email address will not be published.