Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

0

 

ಬೆಂಗಳೂರು:ಸಿಬ್ಬಂದಿ ನೇಮಕಾತಿ ಆಯೋಗದ(ಎಸ್.ಎಸ್.ಸಿ) ವತಿಯಿಂದ ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ(ಸಿ.ಎ.ಪಿ.ಎಫ್) ಸಬ್‍ಇನ್ಸ್‍ಪೆಕ್ಟರ್(ಎಸ್.ಐ)  ಹುದ್ದೆಗಳ ಭರ್ತಿಗಾಗಿ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 20 ರಿಂದ 25 ವರ್ಷ ವಯೋಮಾನದವರಾಗಿರಬೇಕು. ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಆಸಕ್ತರು ಆಗಸ್ಟ್ 15 ರೊಳಗಾಗಿ ವೆಬೆಸೈಟ್  https://ssc.nic.in     ಅಥವಾ  www.ssckkr.kar.nic.in       ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು

Leave A Reply

Your email address will not be published.