ಆದಿತ್ಯ ಎಲ್‌-1 ಮಿಷನ್‌ಗೆ ಕೌಂಟ್‌ಡೌನ್ ಶುರು

ಶ್ರೀಹರಿಕೋಟಾ: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಗೆ ಕ್ಷಣಗಣನೆ ಆರಂಭವಾಗಿದೆ. ಈ ಮಿಷನ್ ನಾಳೆ ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ.

ಈ ಬಾಹ್ಯಾಕಾಶ ನೌಕೆಯನ್ನು PSLV-C57 ನಿಂದ ಉಡಾವಣೆ ಮಾಡಲಾಗುವುದು. ನೀವು ISRO ವೆಬ್‌ಸೈಟ್ isro.gov.in, Facebook ಖಾತೆ  ಮತ್ತುಯೂಟ್ಯೂಬ್ ಚಾನೆಲ್‌ನಲ್ಲಿ ಈ ಉಡಾವಣೆಯನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

ಆದಿತ್ಯ L1 ಅನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.

Advertisement

ಆದಿತ್ಯ ಎಲ್‌ 1 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಿದ ಬಳಿಕ ರಾಕೆಟ್ ಉಪಗ್ರಹವನ್ನು ಕೆಳ ಮಟ್ಟದ ಭೂ ಕಕ್ಷೆಗೆ ತಲುಪಿಸಲಿದೆ. ನಂತರ ಉಪಗ್ರಹದಲ್ಲಿ ಇರುವ ಪ್ರೊಪಲ್ಶನ್‌ಗಳು ಎಂಜಿನ್ ರೀತಿ ಕಾರ್ಯ ನಿರ್ವಹಿಸಿ ಉಪಗ್ರಹವನ್ನು ನಿಧಾನವಾಗಿ ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಸಾಗಿಸಲಿದೆ. ಎಲ್‌ 1 ಕಕ್ಷೆಯ ಬಳಿ ಉಪಗ್ರಹ ತಲುಪಿದ ನಂತರ ಅದನ್ನು ಕ್ರೂಸ್‌ ಹಂತಕ್ಕೆ ತಲುಪಿಸಿ ಸುದೀರ್ಘ ಕಕ್ಷೆಯಲ್ಲಿ ಸ್ಥಿರಗೊಳಿಸಲಾಗುತ್ತದೆ. ಈ ಪ್ರಕ್ರಿಯೆ ಮುಕ್ತಾಯವಾಗಲು ಬರೋಬ್ಬರಿ 4 ತಿಂಗಳು ಬೇಕಾಗುತ್ತದೆ..

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement