ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ಗಿಡಗಳು ಮಾರಾಟಕ್ಕೆ ಲಭ್ಯ

 

ಚಿತ್ರದುರ್ಗ: ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಕøಷ್ಟ ಗುಣಮಟ್ಟದ ಕಸಿ/ಸಸಿ ಗಿಡಗಳು ಮಾರಾಟಕ್ಕೆ ಲಭ್ಯವಿವೆ.

ಲಭ್ಯವಿರುವ ಸಸಿಗಳ ವಿವರ ಇಂತಿದೆ. ತೆಂಗು 62450 ಸಸಿಗಳು, ಅಡಿಕೆ 6806 ಸಸಿಗಳು,  ನಿಂಬೆ 600 ಸಸಿಗಳು, ನುಗ್ಗೆ 8131 ಸಸಿಗಳು, ಕರಿಬೇವು 2000 ಸಸಿಗಳು ಹಾಗೂ ಅಂಜೂರ 2600 ಸಸಿಗಳು ಲಭ್ಯವಿವೆ.

Advertisement

ತೋಟಗಾರಿಕೆ ಇಲಾಖೆಯಿಂದ ಮಾರಾಟ ದರ ಪ್ರತಿ ಒಂದಕ್ಕೆ ತೆಂಗಿನ ಸಸಿಗೆ ರೂ.75, ಅಡಿಕೆ ಸಸಿ ರೂ.25, ನಿಂಬೆ ಸಸಿ ರೂ.18, ನುಗ್ಗೆ ಸಸಿ ರೂ.10, ಕರಿಬೇವು ಸಸಿ ರೂ.15, ಅಂಜೂರ ಸಸಿಗೆ ರೂ.25/- ದರ ನಿಗಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ದೀಪಾ ಭೀಮಪ್ಪ ಹೊಂಕಳಿ  ದೂರವಾಣಿ ಸಂಖ್ಯೆ 7022522921, ಹೆಚ್.ಕೆ ಹರೀಶ್ 9108246371, ಕೃಷ್ಣಮೂರ್ತಿ 9986880609 ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹರ್ಷ ಅವರ ದೂರವಾಣಿ ಸಂಖ್ಯೆ 9980991048 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿದೇಶಕರು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement