ಮಲಗುವ ಕೋಣೆಯಲ್ಲಿ ವಿಷ ಸರ್ಪ ಬಿಟ್ಟು ಪತ್ನಿ ಹಾಗೂ ಮಗಳ ಕೊಂದ ವ್ಯಕ್ತಿ ಅರೆಸ್ಟ್

ಒಡಿಸ್ಸಾ: ವಿಷ ಸರ್ಪವನ್ನು ಮಲಗುವ ಕೊಠಡಿಯಲ್ಲಿ ಬಿಟ್ಟು ಪತ್ನಿ ಹಾಗೂ ಮಗಳನ್ನು ಕೊಂದ ಆರೋಪದ ಮೇಲೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 25 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ಗಣೇಶ್ ಪಾತ್ರ ಎಂದು ಗುರುತಿಸಲಾಗಿದೆ. 2020ರಲ್ಲಿ ವಿವಾಹವಾದ ದಂಪತಿಗೆ ಬಾಸ್ಮಿತಾ ಎಂಬ ಎರಡು ವರ್ಷದ ಮಗಳಿದ್ದಾಳೆ. ಈ ಘಟನೆ ಅಕ್ಟೋಬರ್ 7ರಂದು ನಡೆದಿದೆ.

ಗಣೇಶ್ ಪಂಪಟ್ಟಿಯಿಂದ ಖರೀದಿಸಿದ್ದ ಅತ್ಯಂತ ವಿಷಕಾರಿ ನಾಗರ ಹಾವನ್ನು ಪಪ್ನಿ ಹಾಗೂ ಇಬ್ಬರೂ ಮಲಗಿದ್ದ ಕೊಠಡಿಯಲ್ಲಿ ಬಿಟ್ಟು ಬಂದಿದ್ದ. ಹಾವು ಪತ್ನಿ ಹಾಗೂ ಮಗಳಿಗೆ ಕಚ್ಚಿದ್ದು ಇಬ್ಬರನ್ನೂ ಸಮೀಪದ ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

Advertisement

ಘಟನೆ ನಡೆದ ದಿನ ಆರೋಪಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದ. ಬಳಿಕ ಯುವಕನ ವರ್ತನೆಯಿಂದ ಅನುಮಾನಗೊಂಡ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಯುವಕನನ್ನುವಿಚಾರಣೆಗೊಳಪಡಿಸಿದಾಗ ಮಾಹಿತಿ ಹೊರಬಿದ್ದಿದೆ. ವಿಚಾರಣೆ ವೇಳೆ ಆರಂಭದಲ್ಲಿ ನಿರಾಕರಿಸಿದ್ದ ಆತ ನಂತರ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement