ಮಿಝೋರಾಂ ಚುನಾವಣಾ ಫಲಿತಾಂಶ: ಬಹುಮತದತ್ತ ಝಡ್‌ಪಿಎಂ

ಮಿಜೋರಾಂ: ಮಿಝೋರಾಂ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇನ್ನೇನು ಹೊರ ಬೀಳಲಿದ್ದು, ಆರಂಭಿಕ ಮತ ಎಣಿಕೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 26 ಕ್ಷೇತ್ರಗಳಳ್ಲಿ ಮುನ್ನಡೆ ಸಾಧಿಸಿದೆ.

40 ವಿಧಾನಸಭಾ ಸ್ಥಾನಗಳಿರುವ ಮಿಝೋರಾಂನಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ZPM ಪಕ್ಷ ಬಹುಮತಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 2ರಲ್ಲಿ ಮತ್ತು ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

Advertisement

ನವೆಂಬರ್ 7 ರಂದು ಮಿಝೋರಾಂ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು, 80.66% ರಷ್ಟು ಮತದಾನವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement