ನಮೀಬಿಯಾ ಅಧ್ಯಕ್ಷ ಗೇನ್​ ಗೋಬ್ ನಿಧನ

ನಮೀಬಿಯಾ: ನಮೀಬಿಯಾ ಅಧ್ಯಕ್ಷ ಹೇಗ್ ಗೇನ್​ ಗೋಬ್ ಕ್ಯಾನ್ಸರ್​ನಿಂದ ಇಂದು ಗೇನ್​ ಗೋಬ್ ವಿಂಡ್‌ಹೋಕ್‌ ನಲ್ಲಿರುವ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ವಾರಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹೇಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ತಪಾಸಣೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಕರೆದು ಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಗೇನ್​ಗೋಬ್ ವಿಂಡ್‌ಹೋಕ್‌ನಲ್ಲಿರುವ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಹೇಗ್ ಗೇನ್​ಗೋಬ್ ಅವರು 2014ರಲ್ಲಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ತಾವು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದರು. ಈ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ದೇಶದಲ್ಲಿ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಗಳು ನಡೆಯಲಿವೆ. ಇದೀಗ ಈ ಘಟನೆ ವರದಿಯಾಗಿದ್ದು ಇದರಿಂದ ಸ್ಥಳೀಯ ಜನರು ಹಾಗೂ ಹಲವು ಗಣ್ಯರು ಹೇಗ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement