ಕ್ಯಾಮರಾಮನ್​ಗೆ ಬಾಟೆಲ್ ಎಸೆದ ಮಹೇಂದ್ರ ಸಿಂಗ್ ಧೋನಿ!

ಚೆನ್ನೈ:  ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್​​ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಸಿಎಸ್​ಕೆ ಹೀನಾಯ ಸೋಲು ಅನುಭವಿಸಿತು. ಚೆನ್ನೈ ನೀಡಿದ 211 ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ಪಡೆಗೆ ಆಸರೆಯಾದ ಮಾರ್ಕಸ್​ ಸ್ಟೋಯಿನಿಸ್​ ಬ್ಯಾಟಿಂಗ್ ಆರ್ಭಟಕ್ಕೆ ರುತುರಾಜ್ ಪಡೆ ತತ್ತರಿಸಿ ಹೋಯಿತು.

ಈ ಮೂಲಕ ಸತತ ಎರಡನೇ ಬಾರಿ ಒಂದೇ ತಂಡದ ಎದುರು ಸೋತು ಸುಣ್ಣವಾಯಿತು.

ನಿನ್ನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಬ್ಯಾಟಿಂಗ್ ವೇಳೆ ಮೊದಲ ಇನ್ನಿಂಗ್ಸ್​ನ ಕಡೆಯ ಓವರ್​​ನ ಎರಡು ಬಾಲ್ ಇದ್ದಾಗ ಕ್ರೀಸ್​ಗೆ ಬಂದ ಸಿಎಸ್​ಕೆ ತಂಡದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ, ಓವರ್​ನ ಕಡೆಯ ಬಾಲ್​ಗೆ ಫೋರ್ ಹೊಡೆದು ಡ್ರೆಸ್ಸಿಂಗ್ ರೂಮ್​ನತ್ತ ಸಾಗಿದರು. ಈ ಪಂದ್ಯದಲ್ಲಿ ಮಾಹಿ ಎದುರಿಸಿದ್ದು ಕೇವಲ ಒಂದೇ ಒಂದು ಬಾಲ್ ಆದರೂ ನೆರದಿದ್ದ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ಮಾಹಿ ಬಳಿ ಕ್ಯಾಮರಾಮನ್​ ಜೂಮ್ ಮಾಡಿದರು. ಇದನ್ನು ಗಮನಿಸಿದ ಮಾಹಿ ಕುಡಿಯುವ ನೀರಿನ ಬಾಟಲಿ ಎಸೆದಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

Advertisement

ಇಡೀ ಸಿಎಸ್​ಕೆ ಪಂದ್ಯದಲ್ಲಿ ಹೆಚ್ಚಾಗಿ ಧೋನಿಯನ್ನೇ ಸೆರೆಹಿಡಿಯುವ ಕ್ಯಾಮರಾಮನ್​ಗಳು ಅಭಿಮಾನಿಗಳನ್ನು ಖುಷಿಪಡಿಸಲು ಮಾಹಿ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದಾಗಲೆಲ್ಲಾ ಅವರನ್ನೇ ಹೆಚ್ಚು ತೋರಿಸುತ್ತಾರೆ. ಪಂದ್ಯದ ಪೂರ ಧೋನಿ ಮಯವೇ ಆದ ಕಾರಣ, ಇದು ಕ್ಯಾಪ್ಟನ್ ಕೂಲ್​ಗೂ ಸಹ ಒಂದು ರೀತಿ ಬೇಸರ ಆದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಇದೇ ಕಾರಣಕ್ಕೆ ಅವರು ಬಾಟಲ್ ಎಸೆದಿರಬಹುದು. ಆದರೆ, ಮಾಜಿ ಕ್ಯಾಪ್ಟನ್ ಬಾಟಲ್ ಎಸೆದಿರುವ ವಿಡಿಯೋ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದು ತನ್ನನ್ನೇ ಪದೇ ಪದೇ ತೋರಿಸುವ ಕ್ಯಾಮರಾಮನ್​ಗೆ ಧೋನಿ ಹಾಸ್ಯಸ್ಪದವಾಗಿ ಎಚ್ಚರಿಸಿದಂತಿದೆ. ತಮ್ಮ ನೆಚ್ಚಿನ ಕ್ಯಾಪ್ಟನ್ ಏನು ಮಾಡಿದ್ರು ಅದು ಅಭಿಮಾನಿಗಳಿಗೆ ಖುಷಿಯಾಗಿ ಪರಿಣಮಿಸಲಿದೆಯೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ. ಸದ್ಯ ಈ ವಿಡಿಯೋ ನೋಡಿದ ಧೋನಿ ಅಭಿಮಾನಿಗಳು ತಲಾ ಫಾರ್ ಎ ರೀಸನ್ ಎಂದು ಕಮೆಂಟ್ ಮಾಡಿದ್ದಾರೆ,

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement