ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಎಸ್ ಐಟಿ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ. ನಿನ್ನೆ ತಡರಾತ್ರಿ ದಾಳಿ ನಡೆಸಿರುವ ಎಸ್ ಐಟಿ ಅಧಿಕಾರಿಗಳು ರೇವಣ್ಣ ಅವರ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್,ಗನ್ನಿಕಡದ ಸೂರಜ್ ರೇವಣ್ಣ ಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದೆ. ಒಟ್ಟು ಮೂರು ಕಡೆ ದಾಳಿ ನಡೆಸಿರುವ ಎಸ್ ಐ ಟಿ ಅಧಿಕಾರಿಗಳು ಇಂದು ಹೊಳೆ ನರಸಿಪುರದ ರೇವಣ್ಣ ಮನೆ ಮೇಲೆ ದಾಳಿ ನಡೆಸೋ ಸಾಧ್ಯತೆಯಿದೆ. ಇನ್ನೂ ದಾಳಿ ವೇಳೆ ವಿಡಿಯೋದಲ್ಲಿರೋ ಬ್ಯಾಕ್ ಗ್ರೌಂಡ್ ಸೀನ್ ದಾಳಿ ನಡೆದ ಸ್ಥಳದಲ್ಲಿ ತಾಳೆ ಮಾಡಿ ಕೆಲ ಪೋಟೋ ಗ್ರಫಿಗಳನ್ನ ಸಂಗ್ರಹಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳನ್ನ ಎಸ್ ಐಟಿ ಸಾಕ್ಷಿಗಳಾಗಿ ಪರಿಗಣಿಸೋ ಸಾಧ್ಯತೆಯಿದೆ. ಸುಮಾರು 30ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದಾರೆ. ಎಸ್ ಪಿ ಸೀಮಾ ಲಾಠ್ಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.