SSLC Result : ಉಡುಪಿ ಫಸ್ಟ್‌ ಯಾದಗಿರಿ ಲಾಸ್ಟ್‌

ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್​ಎಲ್​ಸಿ – 01ರ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಕೂಡ ಬಾಲಕಿಯರೇ ಮೇಲೂಗೈ ಸಾಧಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀಯವರು ಈ ಬಾರಿಯ ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಇವರ ಜೊತೆಗೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಕುಮಾರ್ ಸಿಂಗ್ ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸಿ ರಿಸಲ್ಟ್​ ಅನೌನ್ಸ್​ ಮಾಡಿದ್ದಾರೆ. ಈ ಬಾರಿ ಒಟ್ಟು 8.59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ತೇರ್ಗಡೆಯಾದ ವಿದ್ಯಾರ್ಥಿಗಳು ಸಂಖ್ಯೆ 6,31,204. ಲಿಂಗವಾರು ಒಟ್ಟಾರೆ ಫಲಿತಾಂಶ ಬಾಲಕರು : 2,87,416(65.90%) ಬಾಲಕಿಯರು : 3,43,788(81.11%) ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ 1)ಉಡುಪಿ ಪ್ರಥಮ ಸ್ಥಾನ(94%) 2)ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ(92.12%) 3)ಶಿವಮೊಗ್ಗ (88.67%) ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲ್ಲೆ 1)ಯಾದಗಿರಿ 50.59%

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement