ಮೃತ ಯೋಧನ ಶಿರಚ್ಛೇದಕ್ಕೆ ಯತ್ನಿಸಿದ ವಿಡಿಯೋ ಬಿಡುಗಡೆ ಮಾಡಿದ ಉಗ್ರರು

ಶ್ರೀನಗರ: ಇತ್ತೀಚೆಗೆ ಜಮ್ಮುವಿನ ದೋಡಾದಲ್ಲಿ ನಡೆದ ದಾಳಿಯ ಬಳಿಕದ ಘಟನೆಗಳನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಪಾಕಿಸ್ತಾನ ಮೂಲದವರು ಎನ್ನಲಾದ ಭಯೋತ್ಪಾದಕರು ಮೃತ ಸೈನಿಕನ ಶಿರಚ್ಛೇದ ಮಾಡಲು ಯತ್ನಿಸುತ್ತಿರುವುದನ್ನು ಕಂಡು ಬಂದಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನ ‘ಕಾಶ್ಮೀರ ಟೈಗರ್ಸ್’ ಇತ್ತೀಚೆಗೆ ಜಮ್ಮುವಿನ ದೋಡಾದಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸೇನಾಧಿಕಾರಿ ಮತ್ತು ಇತರ ಮೂವರು ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯ ಬಳಿಕದ ಘಟನೆಯ ವಿಡಿಯೋದಲ್ಲಿ ಭಯೋತ್ಪಾದಕರು ಮೃತ ಸೈನಿಕನ ಶಿರಚ್ಛೇದ ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಜೊತೆಗೆ ಈ ವಿಡಿಯೋದಲ್ಲಿ ‘ಕೆಲವು ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಮೃತ ಭಯೋತ್ಪಾದಕನ ದೇಹವನ್ನು ಸೈನಿಕರು ಎಳೆದೊಯ್ದಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ಎಸಗಲಾಗಿದೆ’ ಎಂದು ಭಯೋತ್ಪಾದಕರ ಗುಂಪು ತಿಳಿಸಿದೆ.

ಇನ್ನು ಜೊತೆಗೆ ಘಟನೆಯ ಸಮಯದಲ್ಲಿ ಸೈನಿಕರಿಂದ ನಾವು ಶಸ್ತಾçಸ್ತçಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಭಯೋತ್ಪಾದಕರು ಹೇಳಿದ್ದಾರೆ. ಅದರಂತೆ ಭಯೋತ್ಪಾದಕರು ಹಂಚಿಕೊಂಡಿರುವ ವಿಡಿಯೋದಲ್ಲಿ ಎಕೆ – 47 ಅನ್ನು ಕೂಡ ವಿಡಿಯೊದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ಇನ್ನು ಈ ವಿಡಿಯೋವನ್ನು ಸೇನಾ ಮೂಲಗಳು ಪರಿಶೀಲಿಸುತ್ತಿವೆ.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement