ಹುಬ್ಬಳ್ಳಿ: ಕಲಘಟಗಿ ಮೂಲದ ಮಹಿಳೆಯನ್ನು ವಿವಾಹ ಆಗಿದ್ದ ಬೆಂಗಳೂರು ಮೂಲದ ಮುಜಾಹೀದ್ ಖಾನ್ ಮದುವೆಗೆ ಮುಂಚೆ ಚೆನ್ನಾಗಿಯೇ ಇದ್ದ ಮದುವೆ ಆದ ನಂತರದಲ್ಲಿ ಪ್ರತಿನಿತ್ಯವೂ ಕೂಡಾ ನನ್ನ ಬದುಕನ್ನು ನರಕ ಮಾಡಿದ ಅಂತಾ ನೊಂದ ಮಹಿಳೆ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ.
ಮದುವೆ ಆದ ನಂತರ ಮುಜಾಹೀದ್ ಖಾನ್ ಆಶಾಳಿಗೆ ಪ್ರತಿನಿತ್ಯ ಮಾಂಸದ ಅಡುಗೆ ಮಾಡಿಕೊಡುವಂತೆ ಚಿತ್ರಹಿಂಸೆ ಕೊಡುತ್ತಿದ್ದನಂತೇ.ಹೀಗಾಗಿ ಇದರಿಂದ ನಾನು ಮಾನಸಿಕವಾಗಿ ನೊಂದು ಆತನಿಂದ ದೂರವಾಗಿ ನನ್ನ ಊರಿಗೆ ಬಂದಿದ್ದೇನೆ ಅಂತಾ ಮುಜಾಹೀದ್ ನಿಂದ ಮೋಸಕ್ಕೊಳಗಾದ ಮಹಿಳೆ ತನ್ನ ನೋವನ್ನು ಹೇಳಿದ್ದಾಳೆ.