ರುಚಿಕರವಾದ ಕರಿಬೇವು ಚಟ್ನಿ ಮಾಡುವ ವಿಧಾನ

WhatsApp
Telegram
Facebook
Twitter
LinkedIn

ಬೇಕಾಗುವ ಪದಾರ್ಥಗಳು…

  • ಕರಿಬೇವು- 1 ಬಟ್ಟಲು
  • ಈರುಳ್ಳಿ- 2
  • ಬೆಳ್ಳುಳ್ಳಿ- 20 ಎಸಳು
  • ಹಸಿಮೆಣಸಿನ ಕಾಯಿ – 2-3
  • ಹುಣಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದಷ್ಟು
  • ಅರಿಶಿನ – 1 ಚಿಟಿಕೆ
  • ಎಣ್ಣೆ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

  • ಮೊದಲಿಗೆ ಕರಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದಿಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿ, ಮೆಣಸಿನ ಕಾಯಿ, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಅರಿಶಿನ, ಉಪ್ಪು, ಹುಣಸೆಹಣ್ಣು ಸೇರಿಸಿ 5 ನಿಮಿಷಗಳ ಕಾಲ ಹುರಿದು ಗ್ಯಾಸ್ ಆಫ್ ಮಾಡಿ.
  • ಇದು ತಣ್ಣಗಾದ ಮೇಲೆ ಮಿಕ್ಸಿ ಜಾರ್’ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ಸಾಸಿವೆ ಒಗ್ಗರಣೆ ಹಾಕಬಹುದು.
BC Suddi   About Us
For Feedback - [email protected]

Related News

LATEST Post

WhatsApp Icon Telegram Icon