ಪಿಯುಸಿ ಆದವರಿಗೆ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಕ್ಕೆ ಆಹ್ವಾನ- 42 ಸಾವಿರದವರೆಗೆ ಸಂಬಳ

ಬೆಂಗಳೂರು:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಮತ್ತೆ ಅರ್ಜಿ ಆಹ್ವಾನಿಸಿದೆ. ಪರಿಷ್ಕೃತ ಅಧಿಸೂಚನೆಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಹುದ್ದೆ: ಒಟ್ಟು 1,000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿದೆ. ವಿದ್ಯಾರ್ಹತೆ: PUC, ಡಿಪ್ಲೋಮಾ/ಎರಡು ವರ್ಷದ ಐಟಿಐ/ಎರಡು ವರ್ಷದ ಜೆಒಸಿ, ಜೆಒಡಿಸಿ, ಜೆಎಲ್​ಡಿಸಿ ಪೂರೈಸಿದವರಿಗೆ ಅವಕಾಶ ವೇತನ: ಮಾಸಿಕ ₹21,400 – ₹42,000 ವಯೋಮಿತಿ: ಕನಿಷ್ಠ 18. ಗರಿಷ್ಠ 38 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ.

ಪರೀಕ್ಷೆ 2 ಪತ್ರಿಕೆಯನ್ನೊಳಗೊಂಡಿದ್ದು, ತಲಾ 200 ಅಂಕಗಳಿರುತ್ತದೆ. ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 750 ರೂ. ಮತ್ತು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಪ್ರವರ್ಗ-1, ವಿಶೇಷಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ. ಸೆಪ್ಟೆಂಬರ್​ 19ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್​​ 28 ಕಡೆಯ ದಿನ. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನ ಅಕ್ಟೋಬರ್​ 29. ಈ ಕುರಿತು ವಿವರವಾದ ಮಾಹಿತಿಗೆ kea.kar.nic.in ಗೆ ಭೇಟಿ ನೀಡಿ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement