ಬೆಂಗಳೂರು: ಇಂದೇ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ದರ್ಶನ್ ಪರ ವಕೀಲರು ಮಾತನಾಡಿ, ಕೋರ್ಟ್ ಆರೋಗ್ಯ ಕಾರಣದಿಂದ 6 ವಾರಗಳ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿದರೆ ಇಂದು ಸಂಜೆಯೇ ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದಿದ್ದಾರೆ.
ಅಥವ ದರ್ಶನ್ ಇಂದು ಬಿಡುಗಡೆಯಾಗದೇ ಇದ್ದರೆ ಸೋಮವಾರ ಬಿಡುಗಡೆಯಾಗಬೇಕಾಗುತ್ತದೆ. ನಾಳೆಯಿಂದ ದೀಪಾವಳಿ ರಜೆ ಕಾರಣ, ಎಲ್ಲಾ ಪ್ರಕ್ರಿಯೆಗಳನ್ನು ಇಂದೇ ಮುಗಿಸಲು ವಕೀಲರ ತಂಡ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.