ಬೆಂಗಳೂರು : ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೂಲ್’ ಚಿತ್ರದಲ್ಲಿ ನಟಿಸಿದ್ದ ಸನಾ ಖಾನ್ ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮುಸ್ಲಿಂ ಧರ್ಮಗುರು ಅನಾಸ್ ಸಯ್ಯದ್ ಅವರನ್ನು ಮದುವೆಯಾಗಿದ್ದ ಸನಾ ಖಾನ್ ಅವರಿಗೆ ಈಗಾಗಲೇ ಸೈಯ್ಯದ್ ತಾರಿಖ್ ಜಮೀಲ್ ಹೆಸರಿನ ಮಗನಿದ್ದಾನೆ. ಇದೀಗ ಅವರು 2ನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
‘ಅಲ್ಲಾಹನ ಆಶೀರ್ವಾದದಿಂದ ನಾವು ಮೂವರು ಈಗ ನಾಲ್ವರಾಗುತ್ತಿದ್ದೇವೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕನಾಗಿದ್ದಾನೆ. ಮಗುವಿಗಾಗಿ ನಾವು ಕಾಯುತ್ತಿದ್ದೇವೆ. ಅಲ್ಲಾಹ ನಿಮ್ಮ ಆಶೀರ್ವಾದ ಇರಲಿ’ ಎಂದು ಪೋಸ್ಟ್ ಮಾಡಿದ್ದಾರೆ.
‘ಇಂಥ ಉಡುಗೊರೆ ನೀಡಲು ಅಲ್ಲಾಹನಿಗೆ ಮಾತ್ರ ಅಧಿಕಾರವಿದೆ. ನಮಗೆ ಒಳ್ಳೆಯದು ಮಾಡಲಿ. ಅಲ್ಲಾಹ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ’ ಎಂದು ಅವರು ಬರೆದುಕೊಂಡಿದ್ದಾರೆ. ಸನಾ ಖಾನ್ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.