ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್‌ನಲ್ಲಿದ್ದ 8 ಫೋಟೋಗಳನ್ನು ತನಿಖಾಧಿಕಾರಿಗಳು ತನಿಖಾಧಿಕಾರಿಗಳು ರಿಕವರಿ ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಪುನಿತ್ ಮೊಬೈಲ್‌ನಲ್ಲಿ ಸಿಕ್ಕ ಮಹತ್ವದ ಸಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೋಟೋ ಸಿಕ್ಕರೆ ನನಗೆ ಕಂಟಕವಾಗುತ್ತೆ ಎಂಬ ಭಯದಲ್ಲಿದ್ದ ಪುನೀತ್ ಫೋಟೋಗಳನ್ನು ಡಿಲೀಟ್ ಮಾಡಿದ್ದ. ಇದೀಗ ತನಿಖಾಧಿಕಾರಿಗಳು ರಿಟ್ರೀವ್ ಮಾಡಿದ್ದು ಪುನೀತ್ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ರಿಕವರಿಯಾಗಿದೆ.
ರಿಕವರಿಯಾದ ಫೋಟೋದಲ್ಲಿ, ಕೊಲೆ ನಡೆದ ಶೆಡ್‌ನಲ್ಲಿ ಆರೋಪಿಗಳ ಜೊತೆ ದರ್ಶನ್ ನೀಲಿ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಆರೋಪಿ ವಿನಯ್ ರ‍್ಯಾಗ್ಲಂರ್ ಕಾರಿನ ಮುಂದೆ, ಎ2 ಆರೋಪಿ ನಟ ದರ್ಶನ್, ಮೂವರು ಆರೋಪಿಗಳಾದ ಎ6 ಜಗ್ಗ, ಎ7 ಅನುಕುಮಾರ್, ಎ8 ರವಿಶಂಕರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆರೋಪಿಗಳು ಪುನೀತ್‌ಗೆ ಹಾಯ್ ಎಂದು ಮೇಸೇಜ್ ಮಾಡಿ ಫೋಟೊಗಳನ್ನ ತರಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದೀಗ ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್‌ನಲ್ಲಿ ದೊರೆತ ಫೋಟೋಗಳು ದರ್ಶನ್‌ಗೆ ಕಂಟಕವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಈ ಫೋಟೋಗಳು ಮಹತ್ವದ ಸಾಕ್ಷಿಯಾಗಿ ಪರಿಣಮಿಸಲಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ.