ಮೀನುಗಾರಿಕಾ ದೋಣಿಯಲ್ಲಿ ಸಾಗಿಸ್ತಿದ್ದ 5 ಟನ್ ಮಾದಕ ವಸ್ತು ಕೋಸ್ಟ್ ಗಾರ್ಡ್ ವಶ

WhatsApp
Telegram
Facebook
Twitter
LinkedIn

ಪೋರ್ಟ್ ಬ್ಲೇರ್ : ಅಂಡಮಾನ್‌ನಲ್ಲಿ ಮೀನುಗಾರಿಕಾ ದೋಣಿಯಲ್ಲಿ ಸಾಗಿಸುತ್ತಿದ್ದ ಸುಮಾರು 5 ಟನ್ ಮಾದಕ ವಸ್ತುವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪಡೆದುಕೊಂಡಿದೆ.

ನವೆಂಬರ್‌ನ ಆರಂಭದಲ್ಲಿ ಗುಜರಾತ್‌ನ ಕರಾವಳಿಯಲ್ಲಿ ಅಧಿಕಾರಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಇದನ್ನು ಸಾಗಿಸುತ್ತಿದ್ದ 8 ಇರಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು.

ಆದರೆ ಇದೀಗ ಸುಮಾರು 5 ಟನ್ ಮಾದಕ ವಸ್ತುವನ್ನು ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದ್ದಿ, ಇದು ಇದುವರೆಗೆ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡ ಮಾದಕ ವಸ್ತುವಿನಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಗೆ ಭಾರತ ‘ಸಾಗರ್ ಮಂಥನ್ – 4’ ಎಂಬ ಗುಪ್ತಚರ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಅಂಗವಾಗಿ ನೌಕಾಪಡೆಯು ಭಾರತದ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಮತ್ತು ದೋಣಿಗಳ ಮೇಲೆ ನಿಗಾ ವಹಿಸುತ್ತದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon