ಕಾರವಾರ : ಮನೆಯಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕನೋರ್ವ ಬಲೂನ್ ಊದಲು ಹೋಗಿ, ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ನವೀನ ನಾರಾಯಣ ಬೆಳಗಾಂವಕರ್ (13) ಸಾವನ್ನಪ್ಪಿದ ಬಾಲಕ.
ಮೃತ ಬಾಲಕ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿದ್ದ. ನವೀನ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಲೂನ್ ಊದುವಾಗ ಬಾಯಿಯ ಒಳಗೆ ಜಾರಿ ಹೋಗಿ ಗಂಟಲಲ್ಲಿ ಸಿಲುಕಿಕೊಂಡಿದೆ. ಗಂಟಲಲ್ಲಿ ಬಲೂನ್ ಸಿಲುಕಿಕೊಂಡಿದ್ದ ಪರಿಣಾಮ ನವೀನ್ ಉಸಿರುಗಟ್ಟಿ ಒದ್ದಾಡುತಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾನೆ.