ಇಸ್ಲಾಮಾಬಾದ್ : ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (72) ಅವರು, ಪಾಕಿಸ್ತಾನದಾದ್ಯಂತ ನಾಗರಿಕ ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ತೆಹ್ರೀ ಕ್ ಇ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್, ಈ ಸಂಬಂಧ ಎಕ್ಸ್, ಟ್ವಿಟ್ನಲ್ಲಿ ಶುಕ್ರವಾರ ಪೋಸ್ಟ್ ನಲ್ಲಿ, ರಾಜಕೀಯ ಕೈದಿಗಳ ಬಿಡುಗಡೆ, ಮೇ 9ರಂದು ನಡೆದ ಹಿಂಸಾಚಾರ ಮತ್ತು ನವೆಂಬರ್ 26ರಂದು ನಡೆದ ಪ್ರತಿಭಟನೆ ವೇಳೆ ತಮ್ಮ ಪಕ್ಷದ ಕಾರ್ಯ ಕರ್ತ ರನ್ನು ಹತ್ಯೆ ಮಾಡಿದ್ದರ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಲು ಐವರು ಸದಸ್ಯರ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.
ವಿರೋ ಧ ಪಕ್ಷದ ನಾಯಕ ಉಪರ್ ಅಯೂಬ್ ಖಾನ್ ಮತ್ತು ಖೈಬರ್ ಪಖ್ತುಂ ಖ್ವಾ ಮುಖ್ಯಮಂತ್ರಿ ಅಲಿ ಅಮಿನ್ ಗಂದಪುರ್ ಅವರೂ ಸಮಿತಿಯಲ್ಲಿದ್ದಾರೆ ಎಂದಿದ್ದಾರೆ.ಈ ಬೇ ಡಿಕೆಗಳನ್ನು ಸರ್ಕಾ ರ ಒಪ್ಪದಿದ್ದರೆ, ಡಿಸೆಂ ಬರ್ 14ರಿಂದ ನಾಗರಿಕ ಅಸಹಕಾರ ಚಳವಳಿ ಆರಂಭಿಸಲಾಗುವುದು. ಇದಕ್ಕೆ ಸರ್ಕಾ ರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇಮ್ರಾನ್ ಖಾನ್, ತಮ್ಮ ಪಕ್ಷದ ಬಂಧಿತರನ್ನು ಬಿಡುಗಡೆಮಾಡಬೇಕು ಹಾಗೂ ಪಿಟಿಐ ಪಕ್ಷಕ್ಕೆ ದೊರೆತ ಚುನಾವಣಾ ಫಲಿತಾಂಶವನ್ನು ಅಂ ಗೀಕರಿಸಬೇ ಕು ಎಂದು ಒತ್ತಾಯಿಸಿ ರಾಷ್ಟ್ರ ದಾದ್ಯಂತ ಪ್ರತಿಭಟನೆ ನಡೆಸುವಂತೆ ನವೆಂಬರ್ 14ರಂದು ಕರೆ ನೀಡಿದ್ದರು.