ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರವು ಅತೀ ಪುರಾತನ ಧಾರ್ಮಿಕ ಕ್ಷೇತ್ರಗಳಲೊಂದು.ಈಗಿನ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಹಿಂದೆ “ಕೊಡುಮ” ಎಂಬ ಹೆಸರಿತ್ತು. “ಕೊಡುಮ” ಎಂದರೆ ದಾನ ಕೊಡುವ ಜಾಗ ಎಂದರ್ಥ.
ಪಂಡಿತ್_ ಲಕ್ಷ್ಮಿ ಕಾಂತ ಬಟ್
#ಆಧ್ಯಾತ್ಮಿಕಚಿಂತಕರು_ಹಾಗೂ_ದೈವಜ್ಞ_ಜ್ಯೋತಿಷ್ಯರು ಧರ್ಮಶಾಸ್ತ್ರ ಜ್ಯೋತಿಷ್ಯ ಪ್ರತಿಬಿಂಬ 9945701882
ನೂರಾರು ವರ್ಷಗಳ ಹಿಂದೆ ಇಲ್ಲಿ ಭೀರ್ಮಣ್ಣ ಪರ್ಗಡೆ ಎಂಬ ಜೈನ ಮುಖ್ಯಸ್ಥ ತನ್ನ ಪತ್ನಿ ಆದ ಅಮ್ಮು ಬಲ್ಲಳ್ತಿ ಜೊತೆಯಲ್ಲಿ ವಾಸವಿರುತ್ತಾರೆ. ಅವರಿದ್ದ ಮನೆಯ ಹೆಸರು “ನೆಲ್ಯಾಡಿ ಬೀಡು” ಎಂದಿತ್ತು. ಅವರ ಮನೆಯ ಸಮೀಪದಲ್ಲಿ ಚಂದ್ರನಾತ ಸ್ವಾಮಿ ದೇವಾಲಯವಿತ್ತು. ಭೀರ್ಮಣ್ಣ ಹಾಗು ಅಮ್ಮು ಮಹಾನ್ ದೈವ ಭಕ್ತರಾಗಿದ್ದರು. ಅವರು ಅತ್ಯಂತ ಸರಳ ಹಾಗು ಧಾರ್ಮಿಕ ಜೀವನ ಶೈಲಿ ಹೊಂದಿದ್ದರು. ಎಲ್ಲರನ್ನು ಸದಾ ಪ್ರೀತಿಯಿಂದ ನೋಡಿಕೊಳ್ಳುತಿದ್ದರು.
ಹೀಗಿರುವಾಗ ಒಂದು ದಿನ ಧರ್ಮ ದೇವತೆಗಳು ಮಾರು ವೇಷದಲ್ಲಿ, ಧರ್ಮ ಪಾಲಿಸುವ ಜಾಗಗಳನ್ನ ಹುಡುಕುತ್ತ ಬರುತ್ತಾರೆ. ಅವರ ಸಂಚಾರದ ಭಾಗವಾಗಿ ಕೊಡುಮಗೆ ಬರುತ್ತಾರೆ. ಅವರನ್ನು ನೋಡಿದ ಭೀರ್ಮಣ್ಣ ದಂಪತಿಗಳು ವಿನಯಪೂರ್ವಕ ಅತಿಥಿಸತ್ಕಾರಗಳನ್ನು ನೀಡುತಾರೆ. ಹಾಗು ಇವತ್ತು ಇಲ್ಲೇ ಉಳಿಯಲು ವಿನಂತಿಸಿಕೊಳ್ಳುತ್ತಾರೆ. ಭೀರ್ಮಣ್ಣ ದಂಪತಿಗಳ ಆತಿಥ್ಯದಿಂದ ಬಹಳ ಸಂತುಷ್ಟರಾದ ಧರ್ಮ ದೇವತೆಗಳು ಅಂದು ಉಳಿದುಕೊಳಲು ಒಪ್ಪುತ್ತಾರೆ.
ಅಂದು ರಾತ್ರಿ ಭೀರ್ಮಣ್ಣನ ಕನಸಿನಲ್ಲಿ, ಮನೆಯಲಿದ್ದ ಅತಿಥಿಗಳು ಕಾಣಿಸಿಕೊಳ್ಳುತ್ತಾರೆ. ಆ ಅದ್ಭುತವಾದ ಕನಸಿನಲ್ಲಿ ಅವರು ಭೀರ್ಮಣ್ಣರಿಗೆ “ನಾವು ಸಾಮಾನ್ಯ ಮನುಷ್ಯರಲ್ಲ, ನಾವು ಧರ್ಮ ದೇವತೆಗಳು, ನಿಮ್ಮ ಸತ್ಕಾರಗಳಿಂದ ನಾವು ತುಂಬ ಸಂತೊಷವಾಗಿದ್ದೇವೆ. ಆದ ಕಾರಣ ನಾವು ಇಲ್ಲೇ ನೆಲಸಬೇಕೆಂದು ಇಚಿಸುತ್ತಿದ್ದೇವೆ. ನಮಗೆ ನಿನ್ನ ಮನೆ ” ನೆಲ್ಯಾಡಿ ಬೀಡು” ಬಿಟ್ಟುಕೊಡು. ನಿನ್ನ ವಾಸಕ್ಕೆ ಬೇರೆ ಮನೆ ಕಟ್ಟಿಕೊ” ಎಂದು ಹೇಳಿ ಮಾಯವಾದರು.
ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ಅವರಿಗೆ ಆಶ್ಚರ್ಯವಾಗುತ್ತದೆ. ಅತಿಥಿಗಳು ಇದ್ದ ಕೋಣೆಯಲ್ಲಿ ಖಡ್ಗ ಮತ್ತು ಆಯುಧಗಳು ಮಾತ್ರ ಇದ್ದವು.ತಮ್ಮ ಮನೆಗೆ ಬಂದಿದ್ದು ಸಾಮಾನ್ಯ ಮನುಷ್ಯರು ಅಲ್ಲದೆ ದೇವತೆಗಳು ಎಂದು ತಿಳಿದು ಪುಳಕಿತರಾಗುತ್ತಾರೆ. ದೇವತೆಗಳ ಆದೇಶದಂತೆ ಭೀರ್ಮಣ್ಣ ದಂಪತಿಗಳು ಬೇರೆ ಮನೆ ಕಟ್ಟಿಕೊಳ್ಳುತ್ತಾರೆ. “ನೆಲ್ಯಾಡಿ ಬೀಡು” ನಲ್ಲಿ ದೇವತೆಗಳ ಖಡ್ಗ ಮತ್ತು ಆಯುಧಗಳನ್ನು ಇಟ್ಟು ಪೂಜಿಸತೊಡಗುತ್ತಾರೆ.
ಪಂಡಿತ್_ ಲಕ್ಷ್ಮಿ ಕಾಂತ ಬಟ್
#ಆಧ್ಯಾತ್ಮಿಕಚಿಂತಕರು_ಹಾಗೂ_ದೈವಜ್ಞ_ಜ್ಯೋತಿಷ್ಯರು ಧರ್ಮಶಾಸ್ತ್ರ ಜ್ಯೋತಿಷ್ಯ ಪ್ರತಿಬಿಂಬ 9945701882
ನಂತರ ಭೀರ್ಮಣ್ಣನ ಕನಸಿನಲ್ಲಿ ಧರ್ಮ ದೇವತೆಗಳು ಬಂದು ” ನಾವು ಶಕ್ತಿಶಾಲಿ ಧರ್ಮದೇವತೆಗಳಾಗಿದ್ದು, ನಮ್ಮ ನಾಮೋದಯಗಳು ಕಲಾರಕೈ, ಕಲರಾಹು, ಕುಮಾರಸ್ವಾಮಿ ಹಾಗು ಕನ್ಯಾಕುಮಾರಿ ಆಗಿರುತ್ತದೆ. ನೀನು ನಮಗೆ ಪ್ರತ್ಯೇಕ ಗುಡಿಗಳನ್ನು ಕಟ್ಟಿ “ಪರ್ವ-ನಡವಳಿ” ಪೂಜೆಯನ್ನು ಕಾಲ ಕಾಲಕ್ಕೆ ನೆರವೇರಿಸಬೇಕು.
ಇದಕ್ಕಾಗಿ ನೀನು ಇಬ್ಬರು ಮಹಾನುಭಾವರನ್ನು ನೇಮಿಸಬೇಕು. ಅವರು ನಮ್ಮೋಡನೆ ಸಂದರ್ಶಿಸಿ ನಿನಗೆ ಆದೇಶಗಳನ್ನು ನೀಡುತ್ತಾರೆ. ನಿನ್ನ ಕಾರ್ಯಗಳಲ್ಲಿ ನೆರವಾಗಲು ನಾವು “ಅಣ್ಣಪ್ಪ ದೈವ” ರಿಗೆ ಆದೇಶಿಸುತ್ತೇವೆ. ಕಾಲ ಕಾಲಕ್ಕೆ ಪೂಜೆ ಪುರಸ್ಕಾರಗಳನ್ನು ತಪ್ಪದೇ ಪಾಲಿಸಬೇಕು. ನಿನ್ನ ದೈವ ಭಕ್ತಿ ಮೆಚ್ಚಿ ಈ ಮಹತ್ತರ ಕಾರ್ಯವನ್ನು ನಿನಗೆ ನೀಡುತಿದ್ದೇವೆ.
ಇದರ ಫಲವಾಗಿ ನಾವು ನಿನ್ನ ಹಾಗು ನಿನ್ನ ಕುಟುಂಬವನ್ನು ಕಾಪಾಡುತ್ತೇವೆ. ಈ ಕ್ಷೇತ್ರ ಪ್ರಖ್ಯಾತವಾಗಿ ಧಾನ ಧರ್ಮಗಳು ಆಗುವಂತೆ ನೋಡಿಕೊಳ್ಳುತ್ತೇವೆ. ನೀನು ಯಾವುದೇ ಕಾರಣಕ್ಕೂ ಇಲ್ಲಿಗೆ ಬರುವ ಅತಿಥಿಗಳು ಹಾಗು ಭಕ್ತರಿಗೆ ಊಟ-ವಸತಿಗಳನ್ನು ಮರೆಯುವಂತಿಲ್ಲ. ಇದು ನಿನ್ನ ತಲ ತಲಾಂತರಗಳಿಗೂ ಅನ್ವಯಿಸುತ್ತದೆ. ನಿಮಗೆ ಶುಭವಾಗಲಿ” ಎಂದು ಮಾಯವಾಗುತ್ತಾರೆ.
ಧರ್ಮ ದೇವತೆಗಳು ಅಣ್ಣಪ್ಪ ದೈವರಿಗೆ, ಮಂಗಳೂರಿನ ಕದ್ರಿಗೆ ಹೋಗಿ ಕಾಶಿ ಇಂದ ತಂದಿರುವ ಶಿವ ಲಿಂಗವನ್ನು ತಂದು ಪ್ರತಿಷ್ಟಾಪನೆ ಮಾಡುವಂತೆ ಆದೇಶಿಸುತ್ತಾರೆ.
ಇದರಿಂದ ಭೀರ್ಮಣ್ಣ ದಂಪತಿಗಳು ಸಂತೋಷಗೊಂಡು ಶಿವಲಿಂಗಕ್ಕೂ ಗುಡಿಯನ್ನು ಕಟ್ಟುತ್ತಾರೆ. ಹೀಗೆ ಕೊಡುಮದಲ್ಲಿ ಶ್ರೀ ಚಂದ್ರನಾಥ, ಶ್ರೀ ಮಂಜುನಾಥ, ನಾಲ್ಕು ಧರ್ಮ ದೈವಗಳು ಹಾಗು ಅಣ್ಣಪ್ಪ ದೈವರಿಗೆ ಪೂಜೆಗಳು ಸಲಿಸಲಾಗುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಹೆಗ್ಗಡೆ ಕುಟುಂಬವು ಅಚುಕಟ್ಟಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಧರ್ಮಾಧಿಕಾರಿಗಳು ಶ್ರೀ ಮಂಜುನಾಥನ ಅವತಾರವೆಂದೇ ಹೇಳಲಾಗುತ್ತದೆ.
ಧರ್ಮಾಧಿಕಾರಿ ಹೆಗ್ಗಡೆ ಕುಟುಂಬವು ಗೃಹಸ್ಥರಾಗಿದ್ದು, ಬಹು ಧರ್ಮ ಪಾಲನೆ ಮಾಡುವುದು ಒಂದು ವಿಶೇಷತೆ. ಬೇರೆ ಯಾವ ಧಾರ್ಮಿಕ ಕೇಂದ್ರಗಳಲೂ ಇದು ಕಾಣಸಿಗುವುದಿಲ್ಲ.
ಓಂ ನಮೋ ಮಂಜುನಾಥ !
#ಪಂಡಿತ್_ ಲಕ್ಷ್ಮಿ ಕಾಂತ ಬಟ್
#ಆಧ್ಯಾತ್ಮಿಕಚಿಂತಕರು_ಹಾಗೂ_ದೈವಜ್ಞ_ಜ್ಯೋತಿಷ್ಯರು ಧರ್ಮಶಾಸ್ತ್ರ ಜ್ಯೋತಿಷ್ಯ ಪ್ರತಿಬಿಂಬ 9945701882
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882