ಗಾಜಾ : ಇತ್ತೀಚೆಗೆ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಮಾಸ್ನ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಮೃತಪಟ್ಟಿರುವುದಾಗಿ ಹಮಾಸ್ ದೃಢಪಡಿಸಿದೆ.
ಇಸ್ರೇಲಿ ಮಿಲಿಟರಿ ಆಗಸ್ಟ್ ನಲ್ಲಿ ಡೀಫ್ ದಾಳಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು. ಆದರೆ ಹಮಾಸ್ ಅವರ ಸಾವನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಲಿಲ್ಲ. ಇದೀಗ ಹಮಾಸ್ ಮೊಹಮ್ಮದ್ ಡೀಫ್ ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದೆ.
ಡೀಫ್ ಚಿಕ್ಕವಯಸ್ಸಿನಲ್ಲಿಯೇ ಹಮಾಸ್ ಗೆ ಸೇರಿದ್ದ. 2002ರಲ್ಲಿ ಹಮಾಸ್ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್ನ ನಾಯಕನಾಗಿದ್ದ. 1996 ರಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಇಸ್ರೇಲ್ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದ. ಇನ್ನು ಇಸ್ರೇಲಿ ಗುಪ್ತಚರ ಅನುಸಾರ, ಅವರು ದಶಕಗಳಿಂದ ಇಸ್ರೇಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಇದಕ್ಕೂ ಮುನ್ನ ಡೀಫ್ ಮೇಲೆ 8 ಮಾರಣಾಂತಿಕ ದಾಳಿಗಳು ನಡೆದಿದ್ದವು.