ಬೆಂಗಳೂರು : ಇತ್ತೀಚಿಗಷ್ಟೇ ಹೋಟೆಲ್ಗಳಲ್ಲಿ ಇಡ್ಲಿ ತಯಾರಿಕೆ ಮಾಡುವಾಗ ಬಳಸುವ ಪ್ಲಾಸ್ಟಿಕ್ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಕಾರಣ ರಾಜ್ಯ ಸರ್ಕಾರವು ಪ್ಲಾಸ್ಟಿಕ್ ಗಳನ್ನು ನಿಷೇಧಿಸಲಾಗಿತ್ತು. ಅದಾದ ಬಳಿಕ ಆಹಾರ ಕ್ರಮ ಹಾಗೂ ಬಳಕೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದೆ. ಇದೀಗ ಅಂತೆಯೇ ಮತ್ತೊಂದು ಬಿಗ್ ಚೇಂಜ್ ಜಾರಿಯಾಗಲಿದ್ದು, ಕರ್ನಾಟಕದಲ್ಲಿ ಬಹುಬೇಡಿಕೆಯ ಲಿಪ್ಸ್ಟಿಕ್ ಬ್ಯಾನ್ ಮಾಡುವ ಚಿಂತನೆಯಲ್ಲಿ ರಾಜ್ಯ ಸರ್ಕಾರವಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಅನೇಕ ವಸ್ತು, ತಿನಿಸುಗಳನ್ನು ಬ್ಯಾನ್ ಮಾಡಿಕೊಂಡು ಬರುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ನಿರ್ಧಾರ ಕೈಗೊಂಡಿರುವ ಸರ್ಕಾರ ಲಿಪ್ಸ್ಟಿಕ್ ಬ್ಯಾನ್ ಮಾಡುವ ಯೋಚನೆಯಲ್ಲಿದೆ.
ಇತ್ತೀಚಿಗೆ ಬ್ರಾಂಡ್ ಗಳ ಹೆಸರಿನಲ್ಲಿ ನಕಲಿ ಪ್ರೋಡಕ್ಟ್ ಗಳು ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ನಾನಾ ರೀತಿಯ ತೊಂದರೆಗಳು ಉಂಟಾಗುತ್ತಿದೆ. ಈ ಹಿನ್ನಲೆ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್ ಗಳಿಗೆ ಬ್ರೇಕ್ ಹಾಕುವಂತೆ ಕೋರಿ ಕೇಂದ್ರಕ್ಕೆ ಸಚಿವ ಗುಂಡುರಾವ್ ಪತ್ರ ಬರೆಯಲು ಸಜ್ಜಾಗಿದ್ದಾರೆ.
ಮಹಿಳೆಯರ ಬ್ಯೂಟಿಯನ್ನು ಹೆಚ್ಚಿಸಲು ಬಹಳ ಸಹಾಯಕವಾಗಿರುವ ಲಿಪ್ಸ್ಟಿಕ್, ಲಿಪ್ ಕೇರ್ ಹಾಗೂ ಕಾಸ್ಮೆಟಿಕ್ಸ್ ಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರಕ್ಕೆ ಕಠಿಣ ಕಾನೂನು ಜಾರಿ ತರವಂತೆ ಮನವಿ ಮಾಡಲಿದ್ದಾರೆ.
