ಕಾಡು ಕೊತ್ತಂಬರಿ (Culantro / Wild Coriander) ಎಂಬುದು ಸಾಮಾನ್ಯ ಕೊತ್ತಂಬರಿಗಿಂತ ಹೆಚ್ಚು ಗಾಢವಾದ ಸುವಾಸನೆ ಹೊಂದಿರುವ ಒಂದು ವಿಶಿಷ್ಟ ಸಸ್ಯ. ಇದನ್ನು ವೈಜ್ಞಾನಿಕವಾಗಿ Eryngium foetidum ಎಂದು ಕರೆಯಲಾಗುತ್ತದೆ.
ಕಾಡು ಕೊತ್ತಂಬರಿ ಗಿಡದ ಪ್ರಮುಖ ಲಕ್ಷಣಗಳು:
ರೂಪ: ಇದು ಉದ್ದವಾದ, ಅಂಚಿನಲ್ಲಿ ಮುಳ್ಳಿನಂತಹ ರಚನೆಯಿರುವ ಎಲೆಗಳನ್ನು ಹೊಂದಿರುತ್ತದೆ.
ಸುವಾಸನೆ: ಸಾಮಾನ್ಯ ಕೊತ್ತಂಬರಿಗಿಂತ ಇದರ ಪರಿಮಳ ಮತ್ತು ರುಚಿ ಬಹಳ ತೀಕ್ಷ್ಣವಾಗಿರುತ್ತದೆ.
ಬೆಳವಣಿಗೆ: ಇದು ತೇವಾಂಶವಿರುವ ನೆರಳಿನ ಜಾಗಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಪ್ರಯೋಜನಗಳು:
ಅಡುಗೆಯಲ್ಲಿ: ಇದನ್ನು ಚಟ್ನಿ, ಸಾರು, ಪಲ್ಯಗಳಲ್ಲಿ ಸಾಮಾನ್ಯ ಕೊತ್ತಂಬರಿಯ ಬದಲಾಗಿ ಬಳಸಬಹುದು. ಅಡುಗೆಗೆ ಒಂದು ಸಣ್ಣ ಎಲೆ ಹಾಕಿದರೂ ಸಾಕು, ಇಡೀ ಅಡುಗೆ ಘಮಘಮಿಸುತ್ತದೆ.
ಜೀರ್ಣಕ್ರಿಯೆ: ಇದು ಜೀರ್ಣಶಕ್ತಿಯನ್ನು ಹೆಚ್ಚಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಸಹಕಾರಿ.
ಆರೋಗ್ಯದ ಲಾಭಗಳು: ಈ ಗಿಡವು ಉರಿಯೂತ ಶಮನಕಾರಿ (Anti-inflammatory) ಗುಣಗಳನ್ನು ಹೊಂದಿದ್ದು, ಜ್ವರ, ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಇದರ ಕಷಾಯ ಅಥವಾ ಚಹಾವನ್ನು ಬಳಸಲಾಗುತ್ತದೆ.
ಚರ್ಮದ ಸಮಸ್ಯೆ: ಬಿಳಿ ತೊನ್ನು ಅಥವಾ ಚರ್ಮದ ಮೇಲಿನ ಕಲೆಗಳ ನಿವಾರಣೆಗೆ ಈ ಸೊಪ್ಪಿನ ಬಳಕೆಯ ಬಗ್ಗೆ ಕೆಲವು ಆಯುರ್ವೇದ ಪದ್ಧತಿಗಳಲ್ಲಿ ಉಲ್ಲೇಖವಿದೆ.
ಇದರ ಸುವಾಸನೆಯು ಸಾಮಾನ್ಯ ಕೊತ್ತಂಬರಿಗಿಂತ ಹೆಚ್ಚಿರುವುದರಿಂದ ಅಡುಗೆಗೆ ಕಡಿಮೆ ಪ್ರಮಾಣದಲ್ಲಿ ಬಳಸುವುದು ಸೂಕ್ತ.
Mನಿಮಗೆ ಹೈಬ್ರೀಡ್ ಕೊತ್ತಂಬರಿ ಸೊಪ್ಪು, ನಾಟಿ ಕೊತ್ತಂಬರಿ ಸೊಪ್ಪು ಬಳಸಿ ಕೊತ್ತರಿಬಹುದು, ಎಂದಾದರೂ ಇದಕ್ಕೆ ಪರ್ಯಾಯವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ. ಇದಕ್ಕೆ Culantro ಎಂದು ಕೂಡ ಕರೆಯುತ್ತಾರೆ. ಹಳ್ಳಿಗಳಲ್ಲಿ ಈ ಸೊಪ್ಪನ್ನು ಯಾರೂ ಬೆಳೆಯುವುದು ಬೇಡ, ಅದೇ ನೆಲದಲ್ಲಿ ಬೆಳೆದಿರುತ್ತದೆ.
ಇದು ಕೊತ್ತಂಬರಿ ಸೊಪ್ಪಿಗಿಂತಲೂ ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯವಾಗಿ ಕೂಡ ಬಳಸುತ್ತಾರೆ. ನೀವು ಈ ಗಿಡ ಬೆಳೆಯಲು ಇಚ್ಛೆ ಪಡುವುದಾದರೆ ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಒಂದು ಗಿಡವಿದ್ದರೆ ಸಾಕು ತುಂಬಾ ಗಿಡಗಳಾಗುತ್ತವೆ.
ಕಾಡು ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು
ಇದರಲ್ಲಿ 86-88% ತೇವಾಂಶ, 3.3% ಪ್ರೊಟೀನ್, 0.6% ಕೊಬ್ಬಿನಂಶ, 6.5% ಕಾರ್ಬೋಹೈಡ್ರೇಟ್ಸ್, 1.7% ಬೂದಿ,0.06% ರಂಜಕ, 0.2% ಕಬ್ಬಿಣದಂಶವಿರುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳಾದ ಎ, ಬಿ1, ಬಿ2 ಮತ್ತು ಸಿ, ಖನಿಜಾಂಶಗಳು,ಕುಡಿದೆ
ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಇದರ ಎಲೆಯಿಂದ ತಯಾರಿಸಿದ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಅಧಿಕವಿದ್ದು ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವಲ್ಲಿಯೂ ಸಹಕಾರಿ. ಇನ್ನು ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಕೂಡ ಸಹಕಾರಿ. ಗಿಡಮೂಲಿಕೆಯಲ್ಲಿ ನಮ್ಮ ಮಾನಸಿಕ ಒತ್ತಡಕಡಿಮೆಮಾಡುವ ಶಕ್ತಿ ಇರುತ್ತದೆ
ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ ಕೆಲವರಿಗೆ ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುತ್ತದೆ. ಅದನ್ನು ಹೋಗಲಾಡಿಸಲು ಕೂಡ ಇದು ತುಂಬಾ ಸಹಕಾರಿ. ದಿನಾ ಬೆಳಗ್ಗೆ ಇದರ ಒಂದು ಎಸಳು ಜಗಿದರೆ ಸಾಕು, ಬಾಯಿ ದುರ್ವಾಸನೆ ಬೀರುವುದಿಲ್ಲ. ಇದರ ಸೊಪ್ಪು ತಿಂದಾಗ ಇದು ಬಾಯಿಯಲ್ಲಿರುವ ಸಲ್ಫರ್ ಅಂಶ ಹೋಗಲಾಡಿಸುವುದರಿಂದ ಬಾಯಿ ದುರ್ವಾಸನೆ ಬೀರುವುದಿಲ್ಲ.
ಹೃದಯದ ಆರೋಗ್ಯಕ್ಕೂ ಒಳ್ಳೆಯದು ಇದರಲ್ಲಿ ಫ್ಲೇವೋನಾಯ್ಡ್, ಸಪೋನ್ನಿಸ್, ಸ್ಟಿರಾಯ್ಡ್, ಕ್ಯಾಫಿಕ್ ಆಮ್ಲ ಇದ್ದುಇದು ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದು ಅಕ್ಯೂಟ್ ಸ್ಟೇಜ್ಸ್ ಆಫ್ ವೆಸ್ಕೂಲರ್ ಇದ್ದವರಿಗೆ ಉರಿಯೂತ ಕಡಿಮೆ ಮಾಡಲು ಸಹಕಾರಿ.
ಅಸ್ತಮಾ ಕಡಿಮೆ ಮಾಡುತ್ತದೆ ಕಾಡು ಕೊತ್ತಂಬರಿ ಸೊಪ್ಪು ಬಳಸಿ ಅಸ್ತಮಾ ಕಾಯಿಲೆ ಉಲ್ಬಣವಾಗುವುದನ್ನು ತಡೆಗಟ್ಟಬಹುದು. ಇದನ್ನು ತುಳಸಿ, ಲೆಮನ್‌ಗ್ರಾಸ್, ನಕ್ಷತ್ರಮೊಗ್ಗು ಇವುಗಳ ಜೊತೆ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಅಸ್ತಮ ಕಡಿಮೆ ಆಗುತ್ತದೆ
ಬಂಜೆತನ ತಡೆಗಟ್ಟುವಲ್ಲಿಯೂ ಸಹಕಾರಿ ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸಲು ಇದನ್ನು ಗಿಡಮೂಲಿಕೆಯಾಗಿ ಬಳಸುವುದು ಮನೆಮದ್ದುಗಳಲ್ಲಿ ಇವೆ. ಇದು ಮುಟ್ಟಿನ ಸಮಸ್ಯೆ ನಿವಾರಣೆಗೆ ಸಹಕಾರಿ, ಇದು ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನೂ ಹೆಚ್ಚಿಸುತ್ತದೆ.
ಜಂತು ಹುಳಗಳನ್ನು ಕೊಲ್ಲುತ್ತದೆ
ಇಂಡಿಯನ್ ಜರ್ನಲ್ ಆಫ್ ಫಾರ್ಮಾಕೋಲಾಜಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಸೊಪ್ಪಿಗೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ. ಹೊಟ್ಟೆಯಲ್ಲಿರುವ ಹುಳಗಳನ್ನು ಹೋಗಲಾಡಿಸುವ ಗುಣ ಈ ಸೊಪ್ಪಿನಲ್ಲಿದೆ.
ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸುತ್ತದೆ
ಯಾರಿಗೆ ತುಂಬಾ ಗ್ಯಾಸ್ಟ್ರಿಕ್ ಸಮಸ್ಯೆಯಿದೆಯೋ ಅವರು ಈ ಎಲೆಗಳನ್ನು ಬಳಸುವುದು ಒಳ್ಳೆಯದು. ಇದು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ.
ಸೂಚನೆ: ಹೆಚ್ಚಿನ ಮಾಹಿತಿಗಾಗಿ bcsuddi.com ಯೂಟ್ಯೂಬ್ ಚಾನಲ್ ನೋಡಿ






























