ಶಿಕ್ಷಣ ಇಲಾಖೆಯಲ್ಲಿ ರಂಗ ಶಿಕ್ಷಕರನ್ನು ನೇಮಕ: ಸಿಎಂ ಸಿದ್ದರಾಮಯ್ಯ.!

WhatsApp
Telegram
Facebook
Twitter
LinkedIn

 

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ರಂಗ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾ ಗಂಗೋತ್ರಿ ಮತ್ತು ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹೊನ್ನಾರು ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಇತರೆ ಕಾರಣಗಳಿಂದ ಇಂದಿನ ಮಕ್ಕಳ ಬೌದ್ಧಿಕ ಮಟ್ಟ ಕಡಿಮೆಯಾಗುತ್ತಿದ್ದು, ಆತ್ಮಹತ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ರಂಗಭೂಮಿಯಲ್ಲಿ ತರಬೇತಿ ಪಡೆದವರನ್ನು ಶಿಕ್ಷಕರಾಗಿ ನೇಮಕ ಮಾಡಬೇಕು ಎಂದು ನಟ ಪ್ರಕಾಶ್ ರಾಜ್ ಸಲಹೆ ನೀಡಿದ್ದಾರೆ. ಇದನ್ನು ಸರಕಾರ ಪರಿಗಣಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಇಂದಿನಿಂದ 26 ರ ವರೆಗೆ ಕಲಾಸಕ್ತರಿಗೆ ನಾಟಕಗಳನ್ನು ವೀಕ್ಷಿಸುವ ಸದವಕಾಶ ರಂಗೋತ್ಸವದಿಂದ ದೊರೆತಿದೆ. ನಾಟಕ ತಂಡಗಳು ಐವತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ರಂಗೋತ್ಸವ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ. ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಕೂಡ ಸರ್ಕಾರ ಪರಿಗಣಿಸಲಿದೆ ಎಂದರು.

ನಟನೆ ಎಲ್ಲರಿಗೂ ಬರಲು ಸಾಧ್ಯವಿಲ್ಲ. ರಂಗಭೂಮಿ ಹಿನ್ನೆಲೆಯ ಕಲಾವಿದರು ಹೆಚ್ಚು ಪಳಗಿರುತ್ತಾರಲ್ಲದೆ, ಜನಪ್ರಿಯರೂ ಆಗಿರುತ್ತಾರೆ. ಉಮಾಶ್ರೀ, ಪ್ರಕಾಶ್ ರಾಜ್ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಹಿಂದಿನ ಕಾಲದ ಸಿನಿಮಾಗಳಲ್ಲಿ ಸಂದೇಶಗಳಿರುತ್ತಿತ್ತು. ಇಂದು ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾಗಳು ಬರುವುದು ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತಾಗಿದೆ ಎಂದರು.

ಹಿರಿಯ ನಟ ಪ್ರಕಾಶ್ ರೈ, ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಆದ ಉಮಾಶ್ರೀ, ರಂಗಕರ್ಮಿಗಳಾದ ಮುಖ್ಯಮಂತ್ರಿ ಚಂದ್ರು, ನಾಗಾಭರಣ, ಕಪ್ಪಣ್ಣ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon