ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದಲ್ಲಿ ಸುಮಾರು 2 ಕೋಟಿಯಷ್ಟು ಅವ್ಯವಹಾರವಾಗಿದ್ದು, ಇದರ ವಿರುದ್ದ ಕಾನೂನು ಹೋರಾಟವನ್ನು ಮಾಡುವುದರ ಮೂಲಕ ಸಮುದಾಯಕ್ಕೆ ನ್ಯಾಯವನ್ನು ಕೊಡಿಸುವಂತ ಕಾರ್ಯವನ್ನು ಮಾಡಲಾಗುವುದೆಂದು ಮಾಜಿ ಶಾಸಕರು, ಯಾದವ ಸಮುದಾಯದ ಮುಖಂಡರಾದ ಎ.ವಿ.ಉಮಾಪತಿ ತಿಳಿಸಿದ್ದಾರೆ.
ಚಿತ್ರದುಗ್ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2017-18 ರಿಂದ 2024-25ರ ತನಕ ಯಾದ ಸಂಘದಲ್ಲಿ ಬಾರಿ ಅವ್ಯವಹಾರವಾಗಿದೆ, ನಮ್ಮ ಸಮುದಾಯವರಿಗೆ ಇದ್ದ ಹಾಸ್ಟಲ್ನ್ನು ಕೆಡವಿ ಅಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಕೆಡವಿದ್ದರೂ ಸಹಾ ಅಲ್ಲಿ ಇಲ್ಲಿಯವರೆಗೂ ಸಹಾ ಸಮುದಾಯ ಭವನವನ್ನು ನಿರ್ಮಾಣ ಮಾಡಿಲ್ಲ ಇದರಿಂದ ನಮ್ಮ ಸಮುದಾಯ ಮಕ್ಕಳಿಗೆ ಅನ್ಯಾಯಾವಾಗಿದೆ. ಹಿಂದಿನ ಆಡಳಿತ ಮಂಡಳಿಯವರು 2020-21, 2022-23ನೇ ಸಾಲಿನಲ್ಲಿ ಸಂಘದ ಸಮಾನ್ಯ ಸಭೆಯನ್ನು ನಡೆಸಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ನೋಂದಾವಣಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಸಮುದಾಯ ಭವನ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ. ಹಳೆಯ ಕಟ್ಟಡವನ್ನು ಕೆಡವಿ ಹೂಸದಾಗಿ ಸಮುದಾಯ ಭವನÀ ನಿರ್ಮಾಣಕ್ಕೆ ವಾರ್ಷಿಕ ಮಹಾ ಸಭೆಯಿಂದ ಅನುಮತಿಯನ್ನು ಪಡೆದಿಲ್ಲ, ಇದ್ದಲ್ಲದೆ ಹಳೆಯದಾದ ವಸತಿ ನಿಲಯವನ್ನು ಕೆಡವಲು ಸಹಾ ಪ್ರಾಧಿಕಾರದ ಅಥವಾ ನಗರಸಭೆಯ ಅನುಮತಿಯನ್ನು ಸಹಾ ಪಡೆದಿಲ್ಲ, ಈ ಹಿಂದೆ ಇದ್ದ ಚಿತ್ರದುರ್ಗ ಜಿಲ್ಲಾ ಗೊಲ್ಲರ ವಿದ್ಯಾರ್ಥಿ ನಿಲಯ ಸಂಘವನ್ನು ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲರ) ಸಂಘ (ರಿ) ಎಂದು ಬದಲಾಯಿಸಿದ್ದಾರೆ. ಇದರ ಬೈಲಾದಲ್ಲಿ ಸಮುದಾಯ ಭವನ ನಿರ್ಮಾಣದ ಉದ್ದೇಶ ಇಲ್ಲವಾಗಿದೆ ಎಂದರು.
ಮಾಜಿ ಸಂಸದರಾದ ಎ.ನಾರಾಯಣಸ್ವಾಮಿ ಅವರ ಅನುದಾನದಲ್ಲಿ 50 ಲಕ್ಷ, ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಅನುದಾನದಲ್ಲಿ 20 ಲಕ್ಷ ರೂ ಮಂಜೂರಾಗಿತ್ತು ಇದರಲ್ಲಿ 52.20 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ಅನುಮೋದನೆಯನ್ನು ನೀಡಿದರು, ಆದರೆ ಕಾಮಗಾರಿಗಿಂತ ಹೆಚ್ಚುವರಿಯಾಗಿ 24,84,364 ರೂ ಪಾವತಿಯಾಗಿದೆ. ಇದರ ವಿರುದ್ದ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಸಂಘದ ಮೂಲ ಉದ್ದೇಶ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವುದು ಹಾಗೂ ಅವರಿಗೆ ವಸತಿಯನ್ನು ನೀಡುವುದು ಆದರೆ ಈ ಸಂಘದವರು ಹಾಸ್ಟಲ್ ಕೆಡುವುದಕ್ಕೆ ಯಾರ ಅನುಮತಿ ಯನ್ನು ಪಡೆಯದೆ ಕೆಡವಿದ್ದಾರೆ.ಸಮುದಾಯಭವನ ನಿರ್ಮಾಣ ನಮ್ಮ ಸಂಘದಲ್ಲಿ ಇಲ್ಲದಿದ್ದರೂ ಸಹಾ ಹಿಂದಿನವರು ಹಾಸ್ಟಲ್ ಕೆಡವಿ ಅಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿರುವುದು ನೋಡಿದರೆ ಇವರಿಗೆ ಸಮುದಾಯದ ಪ್ರಗತಿಗಿಂತ ಹಣವನ್ನು ಮಾಡುವ ಉದ್ದೇಶವನ್ನು ಹೊಂದಿದ್ದರೆಂದು ತಿಳಿಯುತ್ತದೆ ಎಂದು ಉಮಾಪತಿ ದೂರಿದರು.
ಸಮಾಜದ ಮುಖಂಡರಾದ ಅಜ್ಜಪ್ಪ ಮಾತನಾಡಿ, ಸಂಘದ ಕೋರಿಕೆಯ ಮೇರೆಗೆ ನಿವೇಶನವನ್ನು ನೀಡಲಾಗಿತ್ತು ಇದಕ್ಕೆ ಸಂಘದವತಿಯಿಂದ 52.90.333 ರೂ.ಗಳನ್ನು ಪಾವತಿ ಮಾಡಲಾಗಿತ್ತು ಆದರೆ ಇದುವರೆವಿಗೂ ಸಹಾ ಆ ನಿವೇಶನ ನಮ್ಮ ಸಂಘಕ್ಕೆ ನೊಂದಾಯಿಸಿಲ್ಲ, 2017-18 ರಿಂದ 2022-24ನೇ ಸಾಲಿನ ತನಕ ಸಂಘದ ದಿನ ನಿತ್ಯದ ವ್ಯವಹಾರ ಜಮಾ ಖರ್ಚು ನಗದು ಪುಸ್ತಕವನ್ನು ನೀಡಿದ್ದು ಇದರಲ್ಲಿ ಅವ್ಯವಹಾರ ಮುಗಿದ ಮೇಲೆ ಯಾರೂ ಸಹಾ ಸಹಿಯನ್ನು ನಮೂದಿಸಿಲ್ಲ, 2017-18, ಹಾಗೂ 2018-19ನೇ ಸಾಲಿನಲ್ಲಿ ಬೆಂಗಳೂರಿನ ಬಿಸಿಎಂ ಕಚೇರಿ ಖರ್ಚು ಎಂದು 1.80 ಲಕ್ಷ ರೂ ಎಂದು ನಮೂದಿಸ ಲಾಗಿದೆ. ಇದ್ದಲ್ಲದೆ 2019ರ ಜನವರಿಯಲ್ಲಿ ಅಲೆಮಾರಿ ಹಾಸ್ಟಲ್ ವಿಚಾರವಾಗಿ ಬೆಂಗಳೂರು ಖರ್ಚು ಎಂದು 80 ಸಾವಿರ ರೂಗಳನ್ನು ಹಾಕಲಾಗಿದೆ ಇದಕ್ಕೆ ಯಾವುದೇ ಓಚರ್ ಇಲ್ಲ, ಇದ್ದಲ್ಲದೆ ಕಾರ್ಯಕಾರಿ ಸಮಿತಿಯ ನಡಾವಳಿಯಲ್ಲಿಯೂ ಸಹಾ ಇಲ್ಲವಾಗಿದೆ ಎಂದು ದೂರಿದರು.
ಚಿತ್ರದುರ್ಗ ಜಿಲ್ಲಾ ಯಾದವ್ (ಗೊಲ್ಲ) ಹೋರಾಟ ಸಮಿತಿಯ ಸಂಚಾಲಕರಾದ ಚಿತ್ತಯ್ಯ ಮಾತನಾಡಿ, ಹಾಸ್ಟಲ್ ಮುಂಭಾಗದ ಮಹಡಿ ಮೇಲೆ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇಂಜಿನಿಯರ್ ಪ್ಲಾನ್ ಆಗಲಿ ಅಂದಾಜು ವೆಚ್ಚವಾಗಲಿ ಮಾಡಿಸಿಲ್ಲ, ಇದರ ಬಗ್ಗೆ ವಾರ್ಷಿಕ ಮಹಾ ಸಭೆಯಲ್ಲಿಯೂ ಸಹಾ ಗಮನಕ್ಕೆ ತಂದಿಲ್ಲ, ಶೌಚಾಲಯ ನಿರ್ಮಾಣಕ್ಕೂ ಸಹಾ ಟೆಂಡರ್ ಕರೆಯದೆ ನಿರ್ಮಾಣ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ವಿದ್ಯುತ್ ಮತ್ತು ವೈರಿಂಗ್ ಹಾಗೂ ಟ್ರಾನ್ಸ್ಫಾರಂ ನಿರ್ಮಾಣಕ್ಕೆ ಕೊಟೇಷನ್ ಕರೆಯದೆ ಕಾಮಗಾರಿಯನ್ನು ನೀಡಲಾಗಿದೆ. 202-24 ಹಾಗೂ 2024-25ನೇ ಸಾಲಿನ ಸಂಘದ ವ್ಯವಹಾರವನ್ನು ಆಡಿಟ್ ಮಾಡಿಸಿಲ್ಲ, ಸಂಘದ ದೈನಂದಿನ ಹಣಕಾಸು ವ್ಯವಹಾರ ನಗದು ಪುಸ್ತಕದಲ್ಲಿ ಕ್ರಮಬದ್ದವಾಗಿ ನಿರ್ವಹಿಸಿಲ್ಲ ಕೆಲವು ಖರ್ಚುಗಳಿಗೆ ಸಮರ್ಪಕವಾದ ದಾಖಲೆಗಳು ಹಾಗೂ ಓಚರ್ಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಸಮುದಾಯದ ಮುಖಂಡರಾದ ಕೃಷ್ಣಮೂರ್ತಿ ಶಿವಣ್ಣ ಗಂಜಿಗಟ್ಟೆ ಉಪಸ್ಥಿತರಿದ್ದರು.

































