ಚಿತ್ರದುರ್ಗ: ಪರೀಕ್ಷೆ ಯನ್ನು ಯಾವುದೇ ಗೂಂದಲ, ಭಯ ಇಲ್ಲದೆ ಧ್ಯರ್ಯದಿಂದ ಬರೆದು ಫಲಿತಾಂಶ ದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಒಂದರಿಂದ ನಾಲ್ಕನೇ ಸ್ಥಾನದಲ್ಲಿತರುವಂತೆ ವಿದ್ಯಾರ್ಥಿಗಳಿಗೆ ಸಂಸದರಾದ ಗೋವಿಂದ ಕಾರಜೋಳ ಮನವಿ ಮಾಡಿದರು.
ಚಿತ್ರದುರ್ಗ ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾದ ದ್ವೀತಿಯ ಪಿಯು ಪರೀಕ್ಷೆ ಯನ್ನು ಬರೆಯಲು ಬಂದಿದ ವಿದ್ಯಾರ್ಥಿ ನಿಯರಿಗೆ ಶುಭ ಕೋರಿ ಮಾಧ್ಯಮದವರೋಂದಿಗೆ ಮಾತನಾಡಿದ ಅವರು ಮಕ್ಕಳಿಗೆ ದ್ವೀತಿಯ ಪಿಯು ಪರೀಕ್ಷೆ ಒಂದು ರೀತಿಯಲ್ಲಿ ತಿರುವಿನ ಘಟ್ಟವಾಗಿದೆ ಇದು ಮುಗಿದ ಮೇಲೆ ಸಿಇಟಿ. ಬರೆಯುವುದರ ಮೂಲಕ ಮುಂದೆ ನಿಮ್ಮ ಬದುಕನ್ನು ರೂಪಿಸಿಕೋಳ್ಳ ಬೇಕಿದೆ. ಕಳೆದ ಬಾರಿ ಚಿತ್ರದುರ್ಗ ಜಿಲ್ಲೆ ಫಲಿತಾಂಶ ದಲ್ಲಿ ಬಹಳ ಹಿಂದೆ ಇತ್ತು ಆದರೆ ಈ ಬಾರಿ ಉತ್ತಮವಾದ ಫಲಿತಾಂಶವನ್ನು ತರುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ಇದರಿಂದ ಚಿತ್ರದುರ್ಗ ಹಾಗೂ ನಿಮ್ಮ ಪೋಷಕ ರಿಗೂ ಸಹಾ ಹೆಸರು ಬರುತ್ತದೆ ಎಂದರು
ಈ ಸಂದರ್ಭದಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೋಡ್ಡಯ್ಯ, ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ಬೇದ್ರೆ,ಯುವಮೋರ್ಚಾದ ಅರುಣ್ ಪರಿಕ್ಷಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು






























