ಚಿತ್ರದುರ್ಗ ಕೇಂದ್ರೀಯ ವಿದ್ಯಾಲಯ: 1 ರಿಂದ 5ನೇ ತರಗತಿ ಪ್ರವೇಶಕ್ಕೆ ನೊಂದಣಿ ಪ್ರಾರಂಭ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಚಿತ್ರದುರ್ಗದ ಕೇಂದ್ರೀಯ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ 1 ರಿಂದ 5ನೇ ತರಗತಿಗಳ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನಿಸಲಾಗಿದೆ. 

1ನೇ ತರಗತಿ ಪ್ರವೇಶಕ್ಕೆ ಆನ್‍ಲೈನ್ ಮೂಲಕ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 02 ರ ರಾತ್ರಿ 11:59 ಕೊನೆಯ ದಿನವಾಗಿದೆ.

ಆಸಕ್ತರು  https://admission.kvs.gov.in ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 31.03.2026ಕ್ಕೆ ಅನ್ವಯವಾಗುವಂತೆ ಕನಿಷ್ಠ 6 ವರ್ಷ ವಯಸ್ಸಾಗಿರಬೇಕು. ಎಲ್ಲಾ ತರಗತಿಗಳಿಗೂ ಇದೇ ದಿನಾಂಕದ ಆಧಾರದ ಮೇಲೆ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸೀಟುಗಳ ಹಂಚಿಕೆಯು ಕೆವಿಎಸ್ ಪ್ರವೇಶ ಮಾರ್ಗಸೂಚಿ 2026-27ರ ಅನ್ವಯ ಇರಲಿದೆ.

2 ರಿಂದ 5ನೇ ತರಗತಿಗಳ ಪ್ರವೇಶಕ್ಕಾಗಿ ಆಫ್‍ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾ. 20 ರಿಂದ ಏ. 02 ರ ಸಂಜೆ 4:00 ಗಂಟೆಯ ಒಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯದ ಸಮೀಪವಿರುವ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ಕಚೇರಿಗೆ ಸಲ್ಲಿಸಬೇಕು. 2 ರಿಂದ 5ನೇ ತರಗತಿವರೆಗೆ ಪ್ರವೇಶ ಮತ್ತು ನೋಂದಣಿ ಅರ್ಜಿಗಳ ವಿವರಗಳು  https://kvsangathan.nic.in/en/admission ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, 2026-27 ಪ್ರವೇಶ ವೇಳಾಪಟ್ಟಿಯ ಪ್ರಕಾರ ನೋಂದಣಿ ಮಾಡಬೇಕು.

ಅರ್ಜಿ ನಮೂನೆಯಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದಲ್ಲಿ ಪರಿಶೀಲನೆಯ ಸಮಯದಲ್ಲಿ ಅಂತಹ ಪ್ರವೇಶಾತಿಯನ್ನು ರದ್ದುಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಪ್ರಾಂಶುಪಾಲರನ್ನು ಅಥವಾ ಪ್ರವೇಶ ಪ್ರಭಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon