ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಾಯಭ್ರಮೆಯಿಂದ ಮಾಡುವುದು ದೇವಪೂಜೆಯಲ್ಲ.
ಜೀವಭ್ರಮೆಯಿಂದ ಅರ್ಪಿಸುವುದು ಲಿಂಗಾರ್ಪಿತವಲ್ಲ.
ಕಾಯದ ಸೂತಕವನಳಿದು ಪೂಜಿಸಿ, ಜೀವನ ಪ್ರಕೃತಿಯ ಮರೆದರ್ಪಿಸಿ,
ಉಭಯವನರಿಯಬಲ್ಲಡೆ, ಕಾಯವೆ ಒಡೆಯ, ಪ್ರಾಣವೆ ಲೆಂಕ.
ಇಂತೀ ಉಭಯ ಲೇಪವಾದಲ್ಲಿ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
-ಶಿವಲೆಂಕ ಮಂಚಣ್ಣ
































