ಚಿತ್ರದುರ್ಗ: ಸಣ್ಣ ರೋಗಗಳು ಎಂದು ನಿರ್ಲಕ್ಷ್ಯ ಮಾಡದಿರಿ ವೈದ್ಯರ ಬಳಿ ಬಂದು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಆಗ ಮಾತ್ರ ಉತ್ತಮ ಆರೋಗ್ಯವಂತರಾಗಲು ಸಾಧ್ಯವೆಂದು ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ನಗರದ ಐದನೇ ವಾರ್ಡಿನಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಆರೋಗ್ಯವೆಂಬುದು ಮಹಾಭಾಗ್ಯ ವಿದ್ದಂತೆ, ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ ಇಲ್ಲದಿದ್ದಲ್ಲಿ ಜೀವನವೇ ಶೂನ್ಯವಾಗುತ್ತದೆ ಹಾಗಾಗಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ವಾರ್ಡ್ಗಳಲ್ಲಿ ಸಹ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಶಿಬಿರವನ್ನ ಆಯೋಜಿಸುವುದರ ಮೂಲಕ ಕಣ್ಣಿನ ಆಪರೇಷನ್ ಗಳನ್ನ ಮಾಡಿಸಲಾಗುತಿದೆ, ಗ್ರಾಮೀಣ ಪ್ರದೇಶದಲ್ಲಿನ ವಯಸ್ಸಾದ ವೃದ್ಧರಿಗೆ ಯಥೇಚ್ಛವಾಗಿ ಕಣ್ಣಿನ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ, ಇಂತಹ ವಯಸ್ಸಾದ ವೃದ್ಧರನ್ನ ಸುರಕ್ಷಿತವಾಗಿ ಕಣ್ಣಿನ ಪರೀಕ್ಷೆಯನ್ನು ನಡೆಸಿ ಅವರಿಗೆ ಅಗತ್ಯವಿದ್ದಲ್ಲಿ ಆಪರೇಷನ್ ಮಾಡಿಸಿ ಸ್ವಚ್ಛಂದವಾಗಿ ಕಣ್ಣು ಕಾಣುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಂದುವರೆ ವರ್ಷದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕಣ್ಣಿನ ಪರೀಕ್ಷೆಯನ್ನು ನಡೆಸಿ, ಇದರಲ್ಲಿ 1136 ಜನರಿಗೆ ಕಣ್ಣಿನ ಆಪರೇಷನ್ ಮಾಡಿಸಲಾಗಿದೆ ಜೊತೆಗೆ 5800 ಜನಗಳಿಗೆ ಉಚಿತವಾಗಿ ಕನ್ನಡಕಗಳನ್ನ ವಿತರಿಸಲಾಗಿದೆ, ಆರೋಗ್ಯ ತಪಾಸಣೆ ಮಾಡುವ ವಿಚಾರದಲ್ಲಿ ಯಾವುದೇ ರೀತಿ ಹಣವನ್ನ ತೆಗೆದುಕೊಳ್ಳದೆ ನಿಷ್ಪಕ್ಷಪಾತವಾಗಿ ಪ್ರಾಮಾಣಿಕವಾಗಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಈ ಒಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಮುಂದಿನ ದಿನಗಳಲ್ಲಿ ಸಹ ನಡೆಯುತ್ತದೆ ಇದರಲ್ಲಿ ಪ್ರತಿಯೊಬ್ಬರು ಕಣ್ಣಿನ ಸಮಸ್ಯೆ ಇರುವಂತವರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್ ಮಾತನಾಡಿ ಸಾಮಾಜಿಕ ಸೇವೆಯಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ಶಾಸಕರ ಕಾರ್ಯಾಲಯದ ಸಿಬ್ಬಂದಿಗಳು ತೊಡಗಿಕೊಂಡಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ, ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇಂಥವರನ್ನ ಗುರುತಿಸಿ ಅವರಿಗೆ ಸರಿಯಾದ ಚಿಕಿತ್ಸೆಯನ್ನ ಕೊಡಿಸುತ್ತಿರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಪೌರಯುಕ್ತೆ ಲಕ್ಷ್ಮಿ, ಕಾರ್ಯಕರ್ತರಾದ ರಾಜಗೋಪಾಲ್, ಬಸವರಾಜ್, ವಾಸಿಮ್, ರೆಹಮಾನ್ ,ಜಲೀಲ್, ಅಮೀನ್, ರಹಮತುಲ್ಲಾ, ಷಣ್ಮುಖಪ್ಪ, ನಾಗರಾಜ್, ಮಂಜುನಾಥ್, ತಿಮ್ಮಣ್ಣ, ರಾಜು, ವಾಸಿಮ್, ಬಾಬರ್, ಗೋವಿಂದರಾಜ್, ಲೋಕೇಶ್, ರಂಗಸ್ವಾಮಿ ಹಾಗೂ ಇತರರು ಇದ್ದರು.































