ದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೇಶದ ನಾಗರಿಕರು ಎಲ್ಲ ವಸ್ತುಗಳ ಬಳಕೆ ಕಡಿಮೆ ಮಾಡಿ, ವಿದೇಶಿ ವಿನಿಮಯ ಸಂಗ್ರಹ ಸಂರಕ್ಷಿಸಲು ಶ್ರಮಿಸಿ ಎಂದಿದ್ದಾರೆ. US-ಇರಾನ್ ಸಂಘರ್ಷದಲ್ಲಿ ಯಾವುದೇ ನೇರ ಭಾಗಿ ಇಲ್ಲದಿದ್ದರೂ ನಾವು ಬಿಕ್ಕಟ್ಟು ಎದುರಿಸುತ್ತಿದ್ದೇವೆ.
ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸುವಂತೆ PM ಮೋದಿ ಈಗಾಗಲೇ ಮನವಿ ಮಾಡಿದ್ದಾರೆ ಎಂದು ವೈಷ್ಣವ್ ನೆನಪಿಸಿದ್ದಾರೆ.






























