ಚಿತ್ರದುರ್ಗ:ಕೇಂದ್ರ ಸರ್ಕಾರದ ಸಾಧನೆಗಳನ್ನು ಜಿಲ್ಲೆಯ ಪ್ರತಿಯೊಂದು ಬೂತ್ಗಳಲ್ಲಿನ ಮತದಾರರಿಗೆ ತಿಳಿಸುವುದರ ಮೂಲಕ ಮುಂಬರುವ ಚುನಾವಣೆಗೆ ಸಿದ್ದರಾಗಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾದ ಕೆ.ಟಿ.ಕುಮಾರಸ್ವಾಮಿ ಕರೆ ನೀಡಿದರು.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವಿಶೇóಷ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಸಭೆಯನ್ನು ಮಾಡುವುದರ ಮೂಲಕ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವಂತ ಕಾರ್ಯವಾಗಬೇಕಿದೆ. ಇದರಿಂದ ಪ್ರತಿ ಬೂತ್ ಮತ್ತು ಪ್ರಕೋಷ್ಟಗಳಿಗೂ ಸಹಾ ಶಕ್ತಿಯನ್ನು ತುಂಬುವಂತ ಕಾರ್ಯವನ್ನು ಮುಂದಿನ ಒಂದು ತಿಂಗಳಲ್ಲಿ ಮಾಡಬೇಕಿದೆ. ಪಕ್ಷ ನೀಡಿದ ಕಾರ್ಯಗಳನ್ನು ಕಾರ್ಯರೂಪಕ್ಕೆ ತರುವಂತ ಕಾರ್ಯವನ್ನು ಮುಂದಿನ ದಿನದಲ್ಲಿ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡಬೇಕಿದೆ, ಪಕ್ಷದ ಸಂಘಟನೆಗೆ ಸಮಯವನ್ನು ನೀಡಬೇಕಿದೆ. ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ. ಇದ್ದಲ್ಲದೆ 2028ರ ವಿಧಾನಸಭೆಯ ಚುನಾವಣೆಗೂ ಸಹಾ ನಾವುಗಳು ಸಿದ್ದರಾಗಬೇಕಿದೆ. ಮುಂದಿನ ಬಾರಿ ಬಿಜೆಪಿ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರÀ ಅಧಿಕಾರಕ್ಕೆ ತರುವಂತ ಕಾರ್ಯವನ್ನು ಮಾಡಬೇಕಿದೆ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ತಿಳಿಸಿದರು.
ದಾವಣಗೆರೆ ವಿಭಾಗ ಸಹಾ ಪ್ರಭಾರಿಗಳಾದ ಎ.ಮುರಳಿ ಮಾತನಾಡಿ, ಪಕ್ಷ ಸಂಘಟನಾತ್ಮಕ ವಿಚಾರವಾಗಿ ನಿರಂತರವಾಗಿ ಪ್ರತಿ ತಿಂಗಳು ಸಭೆಯನ್ನು ಮಾಡುವುದರ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸಲಾಗುತ್ತಿದೆ. ಪಕ್ಷದ ಕಾರ್ಯಕ್ರಮದ ವಿವರಗಳನ್ನು ದಾಖಲಾತಿ ಮಾಡಬೇಕಿದೆ. ಜಿಲ್ಲೆಯಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಸಂಘಟನೆಯನ್ನು ಮಾಡಬೇಕಿದೆ. ಪ್ರಧಾನ ಮಂತ್ರಿಯವರು ಮನಕೀ ಬಾತ್ನಲ್ಲಿ ಪ್ರತಿಯೊಬ್ಬರು ಸಹಾ ನೋಡಬೇಕಿದೆ ಇದ್ದಲ್ಲದೆ ಪ್ರತಿಯೊಂದು ಮಂಡಲ ಮತ್ತು ಬೂತ್ನಲ್ಲಿಯೂ ಸಹಾ ಮನಕೀಬಾತ್ ಕಾರ್ಯಕ್ರಮವನ್ನು ನೋಡುವಂತೆ ಆಗಬೇಕಿದೆ. ಇದರೊಂದಿಗೆ ವಿಶ್ವ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ 12 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಜನ ಕಲ್ಯಾಣ ಯೋಜನೆಯನ್ನು ಆಚರಿಸಬೇಕಿದೆ ಪ್ರಗತಿ ಪಥ ಯಾತ್ರೆಯನ್ನು ಮಾಡಬೇಕಿದೆ ಇದರೊಂದಿಗೆ ದೇಶದ ಸುರಕ್ಷತೆಗಾಗಿ ಎಸ್.ಐ.ಆರ್. ಅವಶ್ಯಕತೆ ಇದೆ ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಜನಪರ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರರಾದ ವೈದ್ಯರು, ಸಾಹಿತಿಗಳು, ವಕೀಲರು, ರೈತರು, ಕಾರ್ಮಿಕರು, ಪತ್ರಕರ್ತರು, ಕಲಾವಿದರ ಜೊತೆಯಲ್ಲಿ ಮೋದಿ ಸರ್ಕಾರ 12 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂವಾದವನ್ನು ಮಾಡಬೇಕಿದೆ ಎಂದು ಮುರಳಿ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಸ್ಥರದ ವಿವಿಧ ಜವಾಬ್ದಾರಿಯುತ ಪ್ರಮುಖರಿಗೆ ನಿಯುಕ್ತಿ ಪತ್ರ ವಿತರಣೆ ಮಾಡ ಲಾಯಿತು ಇದರ ಜೊತೆಯಲ್ಲಿ ಎಸ್.ಐ.ಆರ್ ವಿಷಯದ ಬಗ್ಗೆ ಹಾಗೂ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ರೂಪರೇಷೆ ಹಾಗೂ ಸಂಘಟನಾತ್ಮಕ ಸಭೆಗಳ ಬಗ್ಗೆ ವಿಸ್ಕೃತವಾಗಿ ಚರ್ಚೆ ಮಾಡಿ ವಿಷಯ ಮಂಡನೆ ಮಾಡಲಾಯಿತು.
ಈ ವಿಶೇಷ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್, ಡಾ ಪಿ.ಎಂ ಮಂಜುನಾಥ, ವೆಂಕಟೇಶ್ ಯಾದವ್, ಜಿ,ಹೆಚ್ ಮೋಹನ್ಕುಮಾರ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾದ ಭಾರ್ಗವಿ ದ್ರಾವಿಡ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು,






























