ಚಿತ್ರದುರ್ಗ: ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಕಾಂಗ್ರೆಸ್ನ ಕೆಲವು ನಾಯಕರು ಆರ್.ಎಸ್.ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನೀವು ಎದುರಿಸಬೇಕಾಗಿದ್ದು ಬಿಜೆಪಿ ಪಕ್ಷವನ್ನು, ನರೇಂದ್ರ ಮೋದಿಯವರನ್ನು,, ಅಮಿತ್ ಶಾ ರವರನ್ನು ಸ್ವಯಂಸೇವಕ ಸಂಘವಾದ ಆರ್.ಎಸ್.ಎಸ್ನಲ್ಲ. ಆರ್.ಎಸ್.ಎಸ್ ಅದು ರಾಷ್ಟ್ರೀಯ ಪಕ್ಷವಲ್ಲ, ಅದು ಒಂದು ಸ್ವಯಂಸೇವಕ ಸಂಘ. ಸಂಘ ಪರಿವಾರದಲ್ಲಿರುವವರು ಸನ್ಯಾಸಿಗಳ ತರ ಸಾಮಾಜಿಕ ಕಾರ್ಯ ಮಾಡುತ್ತಿರುತ್ತಾರೆ. ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಂಸದೃಆಧ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ನ್ನು ಟೀಕೆ ಮಾಡುವುದು ಕಾಂಗ್ರೆಸ್ ನಾಯಕರಿಗೆ ಬಾಯಿ ಚಪಲವಾಗಿ ಬಿಟ್ಟಿದೆ. 12 ವರ್ಷಗಳ ಕಾಲ ರಾಷ್ಟ್ರದ ಪ್ರಧಾನಮಂತ್ರಿಯಾಗಿ, 14 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡುವುದು ಎಷ್ಟು ಸರಿ.? ಅಹಿಂದ ಎನ್ನುವ ಕಾಂಗ್ರೆಸ್ ನವರು.. ನರೇಂದ್ರ ಮೋದಿಯವರು ಅಹಿಂದ ವರ್ಗಕ್ಕೆ ಸೇರಿದವರಲ್ಲವಾ.? ನೀವು ಸೋನಿಯಾ ಗಾಂಧಿಯನ್ನು.. ರಾಹುಲ್ ಗಾಂಧಿಯನ್ನು, ಮಲ್ಲಿಕಾರ್ಜುನ ಖರ್ಗೆಯವನ್ನು ಒಪ್ಪಿಸಲಿಕ್ಕೆ ಈ ರೀತಿ ಟೀಕೆ ಮಾಡುತ್ತಿದ್ದೀರಿ ಎಂಧು ಪ್ರಶ್ನಿಸಿದ ಸಂಸದರು, ಈ ದೇಶದ ಜನ ರಾಹುಲ್ ಗಾಂಧಿಯವರನ್ನು ರಿಜೆಕ್ಟ್ ಮಾಡಿದ್ದಾರೆ.. ರಾಹುಲ್ ಗಾಂಧಿಯವರು ರಿಜೆಕ್ಟೆಡ್ ಗೂಡ್ಸ್. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ… ಕೆಲವು ದಿನ ಕಳೆದರೆ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ದೀಪ ಹಚ್ಚುವವರು ಯಾರು ಸಹ ಇರುವುದಿಲ್ಲ ಎಂದು ಟೀಕಿಸಿದರು.
ನಾನು ಹುಟ್ಟು ಕಾಂಗ್ರೆಸ್ಸಿಗ ಎಂದು ಬಿ.ಕೆ ಹರಿಪ್ರಸಾದ್ ಹೇಳುತ್ತಿದ್ದಾರೆ. ಅವರು ರಾಜಕೀಯಕ್ಕೆ ಬಂದಿದ್ದೆ ಸಂಜಯ್ ಗಾಂಧಿಯಿಂದ. ಆದರೆ ಇತ್ತೀಚಿಗೆ ಸಂಜಯ್ ಗಾಂಧಿಯವರ ಪುಣ್ಯತಿಥಿಯನ್ನು ಏಕೆ ಮಾಡಲಿಲ್ಲ.? ನೆಹರು ಕುಟುಂಬದವರ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಆದರೆ ಸಂಜಯ್ ಗಾಂಧಿಯವರು ಪುಣ್ಯತಿಥಿಯನ್ನು ಏಕೆ ಮಾಡಲಿಲ್ಲ.ಪಿ.ವಿ ನರಸಿಂಹರಾವ್ರವರ ಪುಣ್ಯತಿಥಿಯನ್ನು ಏಕೆ ಮಾಡಲಿಲ್ಲ. ಅವರ ಪುಣ್ಯತಿಥಿಯನ್ನ ಮಾಡಿದರೆ ಮುಸ್ಲಿಂ ಮತಗಳು ನಿಮಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರ ಪುಣ್ಯತಿಥಿಯನ್ನು ಮಾಡುತ್ತಿಲ್ಲ. ಡಾ. ಬಿ.ಆರ್ ಅಂಬೇಡ್ಕರ್ರವರ ಸಂವಿಧಾನವನ್ನು ದೇಶದ 140 ಕೋಟಿ ಜನ ಧರ್ಮ ಗ್ರಂಥ ಎಂದು ಒಪ್ಪಿಕೊಂಡಿದ್ದಾರೆ. ಅದನ್ನ ಕಾಂಗ್ರೆಸ್ನವರು ಹೇಳಬೇಕಾಗಿಲ್ಲ. ಆದರೆ ಮತಕೋಸ್ಕರ ಅಂಬೇಡ್ಕರ್ ರವರನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ ಎಂದು ದೂರಿದ ಸಂಸದರು. ಅವರನ್ನು ನೀವೇ ಸೋಲಿಸಿದ್ದೀರಿ. ಅವರಿಗೆ ಹಿಂಸೆ ಕೊಟ್ಟು ಅವರಿಗೆ ಬೇಡವಾದ ಕಾನೂನು ಮಂತ್ರಿ ಮಾಡಿದ್ದೀರಿ… ಅಂತವರು ನೀವು ಅಂಬೇಡ್ಕರ್ ಬಗ್ಗೆ ಮಾತನಾಡುತ್ತೀರಿ. ಇವೆಲ್ಲವಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರು ಹೈಕಮಾಂಡ್ ಅನ್ನಿಸಿಕೊಂಡವರಿಂದ ನನಗೆ ಉತ್ತರ ಬೇಕಾಗಿದೆ ಎಂದರು.
ಗೋಷ್ಟಿಯಲ್ಲಿ ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮಾಧುರಿ ಗೀರೀಶ್, ಮೋಹನ್ ಕುಮಾರ್, ನಗರಾದ್ಯಕ್ಷ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಸಹ ವಕ್ತಾರ ನವೀನ್ ಚಾಲುಕ್ಯ, ಎಸ್,ಸಿ.ಮಾರ್ಚಾದ ಅಧ್ಯಕ್ಷ ಪರಶುರಾಮ್ ಉಪಸ್ಥಿತರಿದ್ದರು.
































