‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್‌ಲೈನ್

ನವದೆಹಲಿ: ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ (ಭಾರತ ಗೆಲ್ಲುತ್ತದೆ) ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಮಹಾಮೈತ್ರಿಕೂಟದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ್ದು, 2024ರ ಚುನಾವಣೆಯು ಬಿಜೆಪಿಯ ಸಿದ್ಧಾಂತ ಮತ್ತು ಅವರ ಚಿಂತನೆಯ ವಿರುದ್ಧ ಹೋರಾಟವಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನು ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ (ಭಾರತ ಗೆಲ್ಲುತ್ತದೆ) ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿದ್ದಾರೆ.

Advertisement

ಕಾಂಗ್ರೆಸ್ ನ INDIA ನಾಮಕರಣಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್‌ಡಿಎಯಲ್ಲಿ (NDA), ‘N’ ಎಂದರೆ ನವ ಭಾರತ, ‘D’ ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ, ‘A’ ಎಂದರೆ ಜನರು ಮತ್ತು ಪ್ರದೇಶಗಳ ಆಕಾಂಕ್ಷೆಗಳು ಎಂದು ಹೇಳಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement