ಮಡಿಕೇರಿ: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ತಮಿಳುನಾಡಿನಿಂದ ಇವರು ಪ್ರವಾಸಕ್ಕಾಗಿ ಬಂದಿದ್ದರು. ಸಾಕಾನೆಗಳಿಗೆ ಸ್ನಾನ ಮಾಡಿಸುವ ವೇಳೆ ಎರಡು ಸಾಕಾನೆಗಳ ನಡುವೆ ಕಾದಾಟ ಉಂಟಾಗಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ































