ದಾವಣಗೆರೆ: ಮಲೇಬೆನ್ನೂರು ಪುರಸಭೆ ವತಿಯಿಂದ 2026-27ನೇ ಸಾಲಿನ ಸಾಮಾನ್ಯ ನಿಧಿ, ಶೇ. 24.10, ಶೇ. 7.25 ಹಾಗೂ ಶೇ. 5ರ ಯೋಜನೆಯಡಿ ವಿವಿಧ ವೈಯಕ್ತಿಕ ಸೌಲಭ್ಯಗಳಿಗಾಗಿ ಅರ್ಹ ಫಲಾನುಭವಿಗಳಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಡ ವರ್ಗದ ರೋಗಿಗಳು ಹಾಗೂ ವಿಕಲಚೇತನರಿಗೆ ಧನಸಹಾಯ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಜನಾಂಗದ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆ ಹಾಗೂ ಲಗತ್ತಿಸಬೇಕಾದ ಅಗತ್ಯ ದಾಖಲೆಗಳ ವಿವರಗಳನ್ನು ಮಲೇಬೆನ್ನೂರು ಪುರಸಭೆ ಕಚೇರಿಯಲ್ಲಿ ಅಥವಾ ಪುರಸಭೆಯ ಅಧಿಕೃತ ವೆಬ್ಸೈಟ್ http://malebennurutown.mrc.gov.in ಮೂಲಕ ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮೇ 20, 2026 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಲೇಬೆನ್ನೂರು ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























