ಬೆಂಗಳೂರು: 8 ಜನ ಕರ್ನಾಟಕ ಆಡಳಿತ ಸೇವೆ (KAS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಎಚ್ ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದಾರೆ.
ಸ್ಥಳ ನಿರೀಕ್ಷಣೆಯಲ್ಲಿದ್ದ ಹಲವು ಹಿರಿಯ ಅಧಿಕಾರಿಗಳಿಗೆ ಈ ಆದೇಶದಲ್ಲಿ ಹೊಸ ಜವಾಬ್ದಾರಿಗಳನ್ನು ನೀಡಲಾಗಿದ್ದು, ಪ್ರಮುಖವಾಗಿ ಹೊಸದಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಮಹತ್ವದ ಹುದ್ದೆಗಳಿಗೆ ಮೂವರು ಅಧಿಕಾರಿಗಳನ್ನು ನೇಮಕ ಮಾಡಿರುವುದು ಈ ವರ್ಗಾವಣೆಯ ಹೈಲೈಟ್ ಆಗಿದೆ.
ವರ್ಗಾವಣೆಗೊಂಡ 8 ಕೆಎಎಸ್ ಅಧಿಕಾರಿಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ:
1.ಚಿದಾನಂದ ಸದಾಶಿವ ವಟಾರೆ
ಹಿಂದಿನ ಹುದ್ದೆ: ಮುಖ್ಯ ಆಡಳಿತಾಧಿಕಾರಿ, ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಸಂಸ್ಥೆ, ಬೆಂಗಳೂರು.
ವರ್ಗಾವಣೆಗೊಂಡ ಹೊಸ ಹುದ್ದೆ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC), ಬೆಂಗಳೂರು.
2.ವಿಜಯ ಈ. ರವಿಕುಮಾರ್
ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.
ವರ್ಗಾವಣೆಗೊಂಡ ಹೊಸ ಹುದ್ದೆ: ಜಂಟಿ ಆಯುಕ್ತರು (ಆಡಳಿತ), ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ, ಬೆಂಗಳೂರು.
3.ಇ. ಬಾಲಕೃಷ್ಣಪ್ಪ
ಹಿಂದಿನ ಹುದ್ದೆ: ಅಪರ ಜಿಲ್ಲಾಧಿಕಾರಿ, ಹೊಸಪೇಟೆ, ವಿಜಯನಗರ ಜಿಲ್ಲೆ.
ವರ್ಗಾವಣೆಗೊಂಡ ಹೊಸ ಹುದ್ದೆ: ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ವಿಜಯನಗರ ಜಿಲ್ಲೆ.
4.ಲೋಕೇಶ್ ಪಿ.ಎನ್.
ಹಿಂದಿನ ಹುದ್ದೆ: ವಿಶೇಷ ಅಧಿಕಾರಿ, ಜಿಲ್ಲಾ ಖನಿಜ ಪ್ರತಿಷ್ಠಾನ, ಬಳ್ಳಾರಿ.
ವರ್ಗಾವಣೆಗೊಂಡ ಹೊಸ ಹುದ್ದೆ: ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ, ಹೊಸಪೇಟೆ, ವಿಜಯನಗರ ಜಿಲ್ಲೆ.
5.ಕವಿತಾ ರಾಜಾರಾಮ್
ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.
ವರ್ಗಾವಣೆಗೊಂಡ ಹೊಸ ಹುದ್ದೆ: ಹೆಚ್ಚುವರಿ ಆಯುಕ್ತರು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.
6.ಅಭಿಜಿನ್ ಬಿ.
ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.
ವರ್ಗಾವಣೆಗೊಂಡ ಹೊಸ ಹುದ್ದೆ: ಜಂಟಿ ಆಯುಕ್ತರು, ಐಟಿ ಸೆಲ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು.
7.ದುರ್ಗಾ ಎನ್.
ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.
ವರ್ಗಾವಣೆಗೊಂಡ ಹೊಸ ಹುದ್ದೆ: ಉಪ ನಿರ್ದೇಶಕರು (ಕಾರ್ಯಾಚರಣೆ), 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ, ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್, ಬೆಂಗಳೂರು.
8.ಡಾ. ಸಂತೋಷ್ ಕುಮಾರ್ ಬಿರಾದಾರ್
ಹಿಂದಿನ ಹುದ್ದೆ: ವಿಶೇಷ ಭೂಸ್ವಾಧೀನಾಧಿಕಾರಿ, ಬಿಡಿಎ-4, ಬೆಂಗಳೂರು.
ವರ್ಗಾವಣೆಗೊಂಡ ಹೊಸ ಹುದ್ದೆ: ವಿಶೇಷ ಭೂಸ್ವಾಧೀನಾಧಿಕಾರಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.































