LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಇತಿಹಾಸಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿಕೊಳ್ಳಬೇಕು: ಟಿ.ರಘುಮೂರ್ತಿ

ಇತಿಹಾಸಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿಕೊಳ್ಳಬೇಕು: ಟಿ.ರಘುಮೂರ್ತಿ

 

ಚಿತ್ರದುರ್ಗ : ಚಿತ್ರದುರ್ಗದ ಇತಿಹಾಸಕ್ಕಾಗಿ ಶ್ರಮಿಸಿದ ಸಾಹಿತಿಗಳು, ಸಂಶೋಧಕರು, ಬರಹಗಾರರನ್ನು ಸ್ಮರಿಸಿಕೊಂಡಾಗ ಮಾತ್ರ ಇತಿಹಾಸ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತಿಳಿಸಿದರು.

ರೇಣುಕಾ ಪ್ರಕಾಶನ, ಚಿತ್ರದುರ್ಗ ಇತಿಹಾಸ ಕೂಟ, ಚಿತ್ರದುರ್ಗ ಸಂಶೋಧನಾ ತಂಡ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಐಎಂಎ. ಹಾಲ್ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಇತಿಹಾಸ ಸಂಶೋಧನ ಪ್ರಸಕ್ತ ಹುಲ್ಲೂರು ಶ್ರೀನಿವಾಸ ಜೋಯಿಸರ ಸ್ಮಾರಕ ಉಪನ್ಯಾಸ ಮಾಲೆ-2 ಅಂಗವಾಗಿ 71 ನೇ ಕನ್ನಡ

ರಾಜ್ಯೋತ್ಸವ ಹಾಗೂ ಎಂ.ಎಸ್.ಪುಟ್ಟಣ್ಣ ಜೀವನ ಸಾಧನೆ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಕನ್ನಡ ಭುವನೇಶ್ವರಿ, ಹುಲ್ಲೂರು ಶ್ರೀನಿವಾಸ ಜೋಯಿಸ್ ಹಾಗೂ ಎಂ.ಎಸ್.ಪುಟ್ಟಣ್ಣವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್.ಪುಟ್ಟಣ್ಣ ಇವರುಗಳು ಚಿತ್ರದುರ್ಗದ ಇತಿಹಾಸಕ್ಕಾಗಿ ಶ್ರಮಿಸಿದ್ದಾರೆ. ಆಧುನಿಕ ಮೊಬೈಲ್, ಎ.ಐ. ಯುಗದಲ್ಲಿದ್ದೇವೆ. ನಮ್ಮ ಸಂಸ್ಕøತಿ ಮೌಲ್ಯ ಉಳಿಯಬೇಕಾದರೆ ಇತಿಹಾಸವನ್ನು ಮೆಲುಕು ಹಾಕಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕಲುಷಿತ ಗೊಂಡಿವೆ. ಅದರಂತೆ ಜನರ ಬದುಕು ಕೂಡ ಬದಲಾವಣೆಯಾಗಿದೆ. ರಾಜನೀತಿಯನ್ವಯ ಪಾಳೆಯಗಾರರು ಯುದ್ದಗಳನ್ನು ಮಾಡುತ್ತಿದ್ದರು. ಎಂ.ಎಸ್.ಪುಟ್ಟಣ್ಣ, ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಾಮಾಣಿಕವಾಗಿ ಬದುಕಿದವರು. ಮದಕರಿನಾಯಕನ ಥೀಂ ಪಾರ್ಕ್ ಬಗ್ಗೆ ಚರ್ಚೆಗಳಾದರೆ ಏನು ಪ್ರಯೋಜನವಿಲ್ಲ. ಕಾರ್ಯರೂಪಕ್ಕೆ ಬರಬೇಕು. ಕೋಟೆ ಸ್ಮಾರಕ ರಕ್ಷಣೆಯಾಗಬೇಕಾದರೆ ನಿರಂತರ ಪ್ರಯತ್ನವಿರಬೇಕೆಂದು ಚಿತ್ರದುರ್ಗದ ಇತಿಹಾಸ ಕೂಟಕ್ಕೆ ಸೂಚಿಸಿದರು.

ಸಂಶೋಧಕರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಲಕ್ಷ್ಮಣ ತೆಲಗಾವಿ ಮಾತನಾಡಿ ಹೊಸ ಗನ್ನಡ ಗದ್ಯದ ಕೃಷಿ ಮಾಡಿದವರು ಎಂ.ಎಸ್.ಪುಟ್ಟಣ್ಣನವರು ಕೃತಿ ರಚಿಸಿ 102 ವರ್ಷಗಳಾಗಿದೆ. ಹುಲ್ಲೂರು ಶ್ರೀನಿವಾಸ ಜೋಯಿಸರು ತಮ್ಮ ಜೀವಿತಾವಧಿಯ ಅರ್ಧ ವಯಸ್ಸನ್ನು ಚಿತ್ರದುರ್ಗದ ಸಂಶೋಧನೆಗೆ ಮುಡುಪಿಟ್ಟವರು. ಎಂ.ಎಸ್.ಪುಟ್ಟಣ್ಣ 1897 ರಲ್ಲಿ ಚಿತ್ರದುರ್ಗದಲ್ಲಿ ಹವಲ್ದಾರ್ ಆಗಿದ್ದವರು. ಕೋಟೆಯಲ್ಲಿ ಸಾಕಷ್ಟು ಓಡಾಡಿ ಇಲ್ಲಿನ ಸ್ಮಾರಕಗಳಿಂದ ಪ್ರೇರಣೆ ಪಡೆದಿದ್ದಾರೆ. ಚಾರಿತ್ರಿಕ ಕೃತಿಗಳ ಸರಣಿ ಆರಂಭಿಸಿದರು. 1919 ರ ಹಿಂದೆ ಚಿತ್ರದುರ್ಗಕ್ಕೆ ಪುಟ್ಟಣ್ಣನವರ ಪ್ರವೇಶವಾಗಿತ್ತು. 1923 ರಲ್ಲಿ ಎಂ.ಎಸ್.ಪುಟ್ಟಣ್ಣ ಪಾಳೆಯಗಾರರ ಐದು ಉಪನ್ಯಾಸಗಳು ಪುಸ್ತಕ ಹೊರ ತಂದರು ಎಂದು ಸ್ಮರಿಸಿದರು.

ಹುಲ್ಲೂರು ಶ್ರೀನಿವಾಸ ಜೋಯಿಸರು ಹಾಗೂ ಎಂ.ಎಸ್.ಪುಟ್ಟಣ್ಣನವರು ಹಾಕಿದ ಅಡಿಪಾಯದ ಮೇಲೆ ಹೊಸ ಹೊಸ ಸಂಶೋಧನೆಗಳು ನಡೆದಿವೆ. ಇವರಿಬ್ಬರು ಕನ್ನಡದ ಕಟ್ಟಾಳುಗಳಾಗಿದ್ದರೆಂದು ಗುಣಗಾನ ಮಾಡಿದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಚಿತ್ರದುರ್ಗದ ಇತಿಹಾಸಕ್ಕೆ ದುಡಿದವರನ್ನು ವರ್ಷಕ್ಕೆ ಎರಡು ಬಾರಿ ಸ್ಮರಿಸುವುದಕ್ಕಾಗಿ ಚಿತ್ರದುರ್ಗ ಇತಿಹಾಸ ಕೂಟ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮತ್ತಿತಿಮ್ಮಣ್ಣನಾಯಕ ಚಿತ್ರದುರ್ಗದ ಪ್ರಥಮ ರಾಜ. ಕೋಟೆ ಮುಂಭಾಗ ಅವರ ಸರ್ಕಲ್ ನಿರ್ಮಾಣ ಮಾಡುವಾಗ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. ಚಿತ್ರದುರ್ಗದಲ್ಲಿ ಅವರ ಪ್ರತಿಮೆಯಾಗಬೇಕು. ಚಿತ್ರದುರ್ಗದ ಇತಿಹಾಸ ಉಳಿಯಬೇಕಾದರೆ ಮೊದಲು ಇಲ್ಲೊಂದು ಮ್ಯೂಸಿಯಂ ಆಗಬೇಕು. ಅದಕ್ಕಾಗಿ ಒಮ್ಮೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಡನೆ ಸಭೆ ನಡೆಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಮಾತನಾಡುತ್ತ ಬರಹಗಾರರು, ಸಾಹಿತಿಗಳು, ಸಂಶೋಧಕರುಗಳಿಂದ ಚಿತ್ರದುರ್ಗದ ಇತಿಹಾಸ ಉಳಿದಿದೆ. ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್.ಪುಟ್ಟಣ್ಣ, ಬಿ.ಎಲ್.ವೇಣು, ಡಾ.ಲಕ್ಷ್ಮಣ ತೆಲಗಾವಿಯವರಂತ ಇನ್ನು ಅನೇಕರು ಬದ್ದತೆಯಿಂದ ಕೆಲಸ ಮಾಡಿದ್ದಾರೆ. ಅಂತಹ ಬದ್ದತೆಯಿರುವ ರಾಜಕಾರಣಿ ಚಿತ್ರದುರ್ಗಕ್ಕೆ ಸಿಗಲಿಲ್ಲವೆನ್ನುವ ಕೊರಗು ಇದೆ. ರಾಜಕಾರಣಿಗಳು, ಅಧಿಕಾರಿಗಳಲ್ಲಿ ಇಚ್ಚಾಶಕ್ತಿಯಿದ್ದರೆ ಮಾತ್ರ ಯಾವುದೇ ಒಂದು ಕ್ಷೇತ್ರ ಅಭಿವೃದ್ದಿಯಾಗಲು ಸಾಧ್ಯ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರ ಅಭಿವೃದ್ದಿಯನ್ನು ನೋಡಿ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿದೆಯೆಂದರೆ ತಪ್ಪಲ್ಲ. ಊರನ್ನು ಉದ್ದಾರ ಮಾಡಬೇಕೆಂಬ ಮನಸ್ಸು ಜನಪ್ರತಿನಿಧಿಗಳಲ್ಲಿರಬೇಕೆಂದರು.

ಇತಿಹಾಸಕಾರರು, ಸಂಶೋಧಕರು, ಬರಹಗಾರರಿಗೆ ಸರ್ಕಾರ ನೆರವಿಗೆ ಬರಬೇಕು. ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿರವರು ಚಳ್ಳಕೆರೆಗಷ್ಟೆ ಸೀಮಿತವಾಗಬಾರದು.

ಚಿತ್ರದುರ್ಗ ಅಭಿವೃದ್ದಿಗೆ ಜೊತೆಗೆ ಕೋಟೆಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ವಿನಂತಿಸಿದರು.

ಇತಿಹಾಸ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ ಮಾತನಾಡಿ ಎಂ.ಎಸ್.ಪುಟ್ಟಣ್ಣ ಹಾಗೂ ಹುಲ್ಲೂರು ಶ್ರೀನಿವಾಸ ಜೋಯಿಸರ ಸ್ಮರಣೆ ಮೂಲಕ ಇತಿಹಾಸ ಪುನರ್ ನಿರ್ಮಾಣವಾಗಬೇಕು. ಅಮಲ್ದಾರರಾಗಿ ಚಿತ್ರದುರ್ಗಕ್ಕೆ ಬಂದ ಎಂ.ಎಸ್.ಪುಟ್ಟಣ್ಣನವರು ಸಾಹಿತ್ಯ ಇತಿಹಾಸಕ್ಕೆ ಬದುಕನ್ನು ಮೀಸಲಿಟ್ಟವರು. ಧೀಮಂತ ಸಂಶೋಧಕರಾಗಿದ್ದ ಅವರ ಹೆಸರನ್ನು ಚಿತ್ರದುರ್ಗದಲ್ಲಿ ಯಾವುದಾದರೊಂದು ರಸ್ತೆ ಇಲ್ಲವೇ ಉದ್ಯಾನವನಕ್ಕೆ ನಾಮಕರಣ ಮಾಡಬೇಕೆಂದು ಸಚಿವರ ಮುಂದೆ ನಿವೇದಿಸಿಕೊಂಡರು.

ಏಳುಸುತ್ತಿನ ಕೋಟೆ ಎಂದೆ ಪ್ರಸಿದ್ದಿಯಾಗಿರುವ ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿನ ಕಲ್ಲುಗಳು ಒಂದೊಂದೆ ಬೀಳುತ್ತಿವೆ. ಸ್ಮಾರಕಗಳನ್ನು ಉಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಡಾ.ಕೆ.ಎಸ್.ಮುಕುಂದರಾವ್, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್ ಇವರುಗಳು ವೇದಿಕೆಯಲ್ಲಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆ ಎಸ್ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಲೋಕಾಯುಕ್ತಕ್ಕೆ ನೋಟಿಸ್.!ಇವತ್ತಿಗೆ ರಾಮಾಯಣ ಚಿತ್ರ ಕಲೆಕ್ಷನ್ ಎಷ್ಟುಕೋಟಿ.!?ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಬ್ಯಾಟಿಂಗ್‌ನಲ್ಲಿ ಎಷ್ಟು ರನ್.!ಚೀನೀ ವಿಜ್ಞಾನಿಗಳು ಕೂದಲು ಉದುರುವಿಕೆ ನಿಲ್ಲಿಸಲು ವಿಶೇಷ ಬಾಚಣಿ ಅಭಿವೃದ್ಧಿ…!ವಾಮಾಚಾರಕ್ಕೆ ಮಾಟ ಮಂತ್ರ ದೂಷಕ್ಕೆ ಶತ್ರು ದೃಷ್ಟಿಗೆ ಜನ ದೃಷ್ಟಿಗೆ ದೃಷ್ಟಿಯಿಂದ ಈ ಶಕ್ತಿಶಾಲಿ ಯಂತ್ರವನ್ನು ಧಾರಣೆ ಮಾಡಿ!ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್.!ಗಾಯತ್ರಿ ಜಲಾಶಯದ ಬಳಿ ನೂತನ ಗೋಶಾಲೆ ಉದ್ಘಾಟನೆ ಜಿಲ್ಲಾಧಿಕಾರಿ ಎಸ್. ರಮ್ಯಾಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದಮಳೆನೀರು ಕೊಯ್ಲು, ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಕರೆ ರಾಜ್ಯಪಾಲ ಡಾ. ಸುಧಾ ಯಾದವ್ .!ರಾಜ್ಯ ಮಟ್ಟದ ಕವಿಗೋಷ್ಠಿ: ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠ.! ಡಾ.ಬಸವಕುಮಾರ ಸ್ವಾಮೀಜಿ.!