LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದ

ಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದ

 

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಜನರು ವಾಸಿಸುವ ಹಳ್ಳಿಗಳ ಸಂಕಷ್ಟಗಳು ಗಮನಕ್ಕೆ ಬಂದಿದ್ದು, ಸರ್ಕಾರದ ಜೊತೆ ಕೈ ಜೋಡಿಸಿ ಸಂಕಷ್ಟಗಳ ಪರಿಹರಿಸಲು ಕ್ರಮ ವಹಿಸುವುದಾಗಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ಭರವಸೆ ನೀಡಿದರು.

ಮೊಳಕಾಲ್ಮೂರು ತಾಲ್ಲೂಕಿನ ಮುತ್ತಿಗಾರಹಳ್ಳಿ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ, ಭಾನುವಾರ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದ ನಡೆಸಿದರು.

ಗ್ರಾಮದ ಸಾರ್ವಜನಿಕರು ಗಮನಕ್ಕೆ ತಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತ ಪ್ರಯತ್ನಿಸಬೇಕು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಖಾತ್ರಿ ಹಾಗೂ  ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸುವಂತೆ ಸೂಚಿಸಿದರು.

ಗ್ರಾಮಕ್ಕೆ ಆಗಮಿಸಿದ ರಾಜ್ಯಪಾಲರನ್ನು ಕಿಲಾರಿ ಬುಡಕಟ್ಟು ಜನರು ತಮ್ಮ ವಿಶೇಷ ವೇಷಭೂಷಣಗಳೊಂದಿಗೆ ಸ್ವಾಗತಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜನ ಜಾತೀಯ ದಿವಸ್ ಶುಭಾಶಯ ಕೋರಿದ ರಾಜ್ಯಪಾಲರಾದ ಡಾ.ಸುಧಾ ಯಾದವ್, ಗ್ರಾಮದಲ್ಲಿ ಎಷ್ಟು ಸರ್ಕಾರಿ ಶಾಲೆಗಳು ಇವೆ ಎಂದು ಪ್ರಶ್ನಿಸುವ ಮೂಲಕ ಸಂವಾದ ಆರಂಭಿಸಿದರು. ಯಾವ ಹಂತದವರೆಗಿನ ಶಿಕ್ಷಣ ಗ್ರಾಮದಲ್ಲಿ ಲಭ್ಯವಿದೆ. ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣ ಪಡೆಯಲು ಗ್ರಾಮದ ಹೆಣ್ಣು ಮಕ್ಕಳಿಗೆ ಇರವ ತೊಂದರೆ ಬಗ್ಗೆ ವಿಚಾರಿಸಿದರು.

ಗ್ರಾಮವು 5 ಹಳ್ಳಿಗಳ ಕ್ಲಸ್ಟರ್ ಆಗಿದ್ದು, ಪ್ರತಿ ಗ್ರಾಮದಲ್ಲಿಯೂ ಪ್ರಾಥಮಿಕ ಶಾಲೆಗಳು ಇವೆ. ಹೈಸ್ಕೂಲ್ ಹಂತದ ಶಾಲೆಗೆ ಹತ್ತಿರದ ಬಿ.ಜಿ.ಕೆರೆ ಗ್ರಾಮಕ್ಕೆ ಹೋಗಬೇಕು. ಕಾಲೇಜು ಶಿಕ್ಷಣ ಪಡೆಯಲು ಮೊಳಕಾಲ್ಮೂರು ಹಾಗೂ ಬಳ್ಳಾರಿಗೆ ಹೋಗಬೇಕು. ಆದರೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಅಂಗನವಾಡಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಸಿರಿಧಾನ್ಯಗಳಿಂದ ಮಾಡಿದ ಪೌಷ್ಟಿಕ ಆಹಾರ, ಮೊಟ್ಟೆ, ಹಾಲು ನೀಡಲಾಗುತ್ತದೆ. ಪ್ರತಿ ಅಂಗನಾಡಿಯಲ್ಲೂ ಅಡುಗೆ ಸಹಾಯಕರು ಇದ್ದಾರೆ ಎಂದು ಅಂಗನಾವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಿದರು.

ಈ ವೇಳೆ ಅಂಗನವಾಡಿ ಕಟ್ಟಡಗಳು ಶಿಥಿಲವಾಗಿದ್ದು, ಗ್ರಾಮದಲ್ಲಿ ಪ್ಲೋರೈಡ್‍ಯುಕ್ತ ಕುಡಿಯುವ ನೀರು ಸರಬರಾಜಿನ ಬಗ್ಗೆ ಗ್ರಾಮಸ್ಥರು ರಾಜ್ಯಪಾಲರ ಗಮನ ಸೆಳೆದರು. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ಜಿಲ್ಲೆಯ ಎಲ್ಲ ಅಂಗನವಾಡಿಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ. ಜಲ ಜೀವನ್ ಮಿಷನ್ ಅಡಿ ಕಾರ್ಯಾತ್ಮಕ ನಳಗಳನ್ನು ಅಳವಡಿಸಿ ಶುದ್ಧ ಕುಡಿಯವ ನೀರು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಸ್ಪಷ್ಟನೆ ನೀಡಿದರು.

ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಹೆಚ್ಚಿಸಿಬೇಕು. ದೇವರ ಎತ್ತುಗಳ ಪಾಲಕರಾದ ಕಿಲಾರಿಗಳಿಗೆ ಮಾಹೆಯಾನ ರೂ.5000 ಗೌರವಧನ ನೀಡಬೇಕು ಎಂದು ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ.ಯೋಗೇಶ್ ಬಾಬು ಮನವಿ ಮಾಡಿದರು.

ಮುತ್ತಿಗ್ಯಾರ ಸಂಸ್ಥಾನದ ಮ್ಯಾಸ ಮಂಡಲವನ್ನು ಸುತ್ತಮುತ್ತಲಿನ ಗೋಮಾಳ ರಾಷ್ಟ್ರೀಯ ಪ್ರಮುಖ ಯೋಜನೆಗಳಿಗೆ ನೀಡಲಾಗಿದೆ. ಪ್ರಸ್ತುತ ಇರುವ 15 ಎಕರೆ ಗೋಮಾಳವನ್ನು ದೇವರ ಎತ್ತುಗಳಿಗೆ ಮೀಸಲು ಇಡಬೇಕು. ಗೋವುಗಳ ಜೊತೆಗೆ ಕುರಿ ಮೇಕೆಗಳಿಗೂ ಮೇವು ಒದಗಿಸುವಂತೆ ಗ್ರಾಮಸ್ಥರು ಕೋರಿದರು. ಬುಡಕಟ್ಟಿನ ಪಾಲಯ್ಯ ಮತ್ತು ಸಂಗಡಿಗರು ಕಿಲಾರಿ ಹಾಡು ಹೇಳುವ ಮೂಲಕ ರಾಜ್ಯಪಾಲರ ಗಮನ ಸೆಳೆದರು. ದೇವರ ಎತ್ತುಗಳ ಪೌಳಿಯನ್ನು ರಾಜ್ಯಪಾಲರು ವೀಕ್ಷಿಸಿದರು.

ಈ ವೇಳೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ  ಡಾ.ಎಸ್. ಆಕಾಶ್ ಸೇರಿದಂತೆ ರಾಜ್ಯಪಾಲರ ಕಚೇರಿಯ ಹಿರಿಯ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆ ಎಸ್ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಲೋಕಾಯುಕ್ತಕ್ಕೆ ನೋಟಿಸ್.!ಇವತ್ತಿಗೆ ರಾಮಾಯಣ ಚಿತ್ರ ಕಲೆಕ್ಷನ್ ಎಷ್ಟುಕೋಟಿ.!?ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಬ್ಯಾಟಿಂಗ್‌ನಲ್ಲಿ ಎಷ್ಟು ರನ್.!ಚೀನೀ ವಿಜ್ಞಾನಿಗಳು ಕೂದಲು ಉದುರುವಿಕೆ ನಿಲ್ಲಿಸಲು ವಿಶೇಷ ಬಾಚಣಿ ಅಭಿವೃದ್ಧಿ…!ವಾಮಾಚಾರಕ್ಕೆ ಮಾಟ ಮಂತ್ರ ದೂಷಕ್ಕೆ ಶತ್ರು ದೃಷ್ಟಿಗೆ ಜನ ದೃಷ್ಟಿಗೆ ದೃಷ್ಟಿಯಿಂದ ಈ ಶಕ್ತಿಶಾಲಿ ಯಂತ್ರವನ್ನು ಧಾರಣೆ ಮಾಡಿ!ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್.!ಗಾಯತ್ರಿ ಜಲಾಶಯದ ಬಳಿ ನೂತನ ಗೋಶಾಲೆ ಉದ್ಘಾಟನೆ ಜಿಲ್ಲಾಧಿಕಾರಿ ಎಸ್. ರಮ್ಯಾಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದಮಳೆನೀರು ಕೊಯ್ಲು, ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಕರೆ ರಾಜ್ಯಪಾಲ ಡಾ. ಸುಧಾ ಯಾದವ್ .!ರಾಜ್ಯ ಮಟ್ಟದ ಕವಿಗೋಷ್ಠಿ: ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠ.! ಡಾ.ಬಸವಕುಮಾರ ಸ್ವಾಮೀಜಿ.!