LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ರಾಜ್ಯ ಮಟ್ಟದ ಕವಿಗೋಷ್ಠಿ: ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠ.! ಡಾ.ಬಸವಕುಮಾರ ಸ್ವಾಮೀಜಿ.!

ರಾಜ್ಯ ಮಟ್ಟದ ಕವಿಗೋಷ್ಠಿ: ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠ.! ಡಾ.ಬಸವಕುಮಾರ ಸ್ವಾಮೀಜಿ.!

 

ಚಿತ್ರದುರ್ಗ : ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಮುರುಘರಾಜೇಂದ್ರ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದ್ದಾರೆ.

ಅವರು ಭಾನುವಾರ ನಗರದ ರೋಟರಿ ಕ್ಲಬ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು. ಕುವೆಂಪು, ಬೇಂದ್ರೇ ಸೇರಿದಂತೆ ನಾಡಿದ ಶ್ರೇಷ್ಠ ಕವಿಗಳು ತಮ್ಮ ಜೀವನದ ಅನುಭವಗಳನ್ನು ತಮ್ಮ ಸಾಹಿತ್ಯದಲ್ಲಿ ಹಂಚಿಕೊAಡಿದ್ದಾರೆ. ಜೀವನದಲ್ಲಿ ಸಿಹಿ,ಕಹಿ ಅನುಭವಗಳು ಕವನ,ಕಥೆಗಳ ರೂಪದಲ್ಲಿ ಹೊರಹೊಮ್ಮುತ್ತವೆ. ಶರಣರ ವಚನಗಳು,ದಾಸರ ಕೀರ್ತನೆಗಳು ಸೇರಿದಂತೆ ಹಲವಾರು ಸಾಹಿತ್ಯಗಳು ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಜೈನ ಕವಿಗಳು ಸಾವಿರಾರು ಕಥೆಗಳ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು ರಚಿಸಿದ ಕಥೆಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣ,ಗಾಂಧೀಯವರು ಪ್ರತಿಪಾದಿಸಿದ್ದ ಮೌಲ್ಯಗಳನ್ನು ಜೈನ ಧರ್ಮದ ಮುನಿಗಳು, ಸಾಹಿತಿಗಳು ತಮ್ಮ ಕೃತಿಗಳಲ್ಲಿ ಎಲ್ಲ ಸಾಹಿತಿಗಳಿಗಿಂತ ಮೊದಲು ಪ್ರತಿಪಾದಿಸಿದ್ದಾರೆ. ಪಂಪ ಮಾನವ ಕುಲಂ ತಾನೊಂದೆ ವಲಂ ಎಂದು ಎಲ್ಲ ಜಾತಿ,ಧರ್ಮಗಳನ್ನು ಮೀರಿದ ಸಂದೇಶವನ್ನು ನೀಡಿದ್ದರು.

 ಜಾಗತಿಕ ಭಾಷೆ ಎನಿಸಿಕೊಂಡಿರುವ ಇಂಗ್ಲೀಷ್ ನ ಜಾಗತೀಕರಣದಿಂದ ಸ್ಥಳೀಯ ಭಾಷೆಗಳು ಅವಸಾನದ ಅಂಚಿನಲ್ಲಿವೆ. ಗ್ರಾಮೀಣ ಭಾಗದಲ್ಲಿರುವ ರೈತರು ಪ್ರತಿದಿನ ನೂರಾರು ಇಂಗ್ಲೀಷ್ ಪದಗಳನ್ನು ಬಳಸುತ್ತಿದ್ದಾರೆ. ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದ ಕಾಲ ಬದಲಾಗಿದೆ. ಮೊಬೈಲ್ ರೀಲ್ಸ್ ತೋರಿಸಿ ಮಕ್ಕಳನ್ನು ಬೆಳೆಸುವ ಪ್ರವೃತ್ತಿ ಚಾಲನೆಗೆ ಬಂದಿದೆ. ಮೊಬೈಲ್‌ನಿಂದ ಸಾಮಾಜಿಕ ಸಂಬAಧಗಳು ಕುಸಿಯುತ್ತಿವೆ. ಎಲ್ಲ ಸಮಾಜಗಳಲ್ಲಿ ದುಡಿಯುವ ವರ್ಗವನ್ನು ಪ್ರೀತಿಸಿ,ಗೌರವಿಸಬೇಕಾಗಿದೆ. ಬಸವಣ್ಣನವರು ಶರಣ ಹರಳಯ್ಯ ಕಾಯಕವನ್ನು ಗೌರವಿಸುವ ಉದ್ದೇಶದಿಂದ ಅವರು ತಯಾರಿಸಿದ ಚರ್ಮದ ಚಪ್ಪಲಿಗಳನ್ನು ತಲೆಮೇಲೆ ಹೊತ್ತು ಗೌರವಿಸಿದರು. ಆದರೆ ಇಂದು ನಟನೆ ಮಾಡುವ ವ್ಯಕ್ತಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವ ಮನೋಸ್ಥಿತಿ ಬಂದಿದೆ. ಬದುಕನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಮ್ಮೇಳನಗಳಿಗಿಂತ ಇಂಥಹ ಕವಿಗೋಷ್ಠಿಗಳು ಹೆಚ್ಚು ಪ್ರಯೋಜನವಾಗಲಿದೆ ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಜಿ.ಕರಿಯಪ್ಪ ಮಾಳಿಗೆ ಮಾತನಾಡಿ, ಸಾಹಿತ್ಯವು ಜನರನ್ನು ಬಂಧಿಸುವ ಶಕ್ತಿ ಹೊಂದಿದೆ. ಸಹಬಾಳ್ವೆ, ಸಮಚಿತ್ತ ಮತ್ತು ಸಹಜೀವನದ ಜವಾಬ್ದಾರಿಯನ್ನು ಸಾಹಿತ್ಯ ಕಲಿಸುತ್ತದೆ. ಹಸಿವು, ಬಡತ, ಆಕ್ರೋಶ,ಸಿಟ್ಟು ಸೇರಿದಂತೆ ಮಾನವೀಯ ತುಡಿತಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮುತ್ತದೆ. ಕಾಡಿನಲ್ಲಿರುವ ಹೂವುಗಳಂತೆ ಎಲ್ಲರೂ ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು. ಅನ್ಯರನ್ನು ಗೌರವಿಸುವ ಸಂಸ್ಕೃತಿ ಇಂದು ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ತತ್ವಪದಗಳು ಬದುಕಿನ ಸಾರವನ್ನು ಕಟ್ಟಿಕೊಡುತ್ತವೆ.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ರಾಜ್ಯಮಟ್ಟದ ಕವಿಗೋಷ್ಠಿಗೆ ಉತ್ತಮ ಸ್ಪಂದನೆ ದೊರೆಕಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ 156 ಕವಿಗಳು ತಮ್ಮ ಕವನಗಳನ್ನು ಕಳಿಸಿದ್ದರು. ಇವುಗಳಲ್ಲಿ 56 ಕವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೈಸೂರು, ಬೆಳಗಾವಿ,ಚಿಕ್ಕಮಗಳೂರು ಸೇರಿದಂತೆ ಆಂದ್ರಪ್ರದೇಶದ ಕಲ್ಪನ ಸಾಗರಂ ತೆಲುಗು ಭಾಷೆಯ ಮೂಲಕ ಕನ್ನಡವನ್ನು ವರ್ಣಿಸಿರುವುದು ವಿಶೇಷವಾಗಿದೆ ಎಂದರು.

ಗುರುಮಠಕಲ್‌ನ ಶಾಂತವೀರ ಸ್ವಾಮೀಜಿ ಮಾತನಾಡಿ, ಸಾಹಿತ್ಯಕ್ಕೆ ಎಲ್ಲರನ್ನು ಬೆಸೆಯುವ ಶಕ್ತಿಯಿದೆ. ನಾನಾ ಜಿಲ್ಲೆಗಳಿಂದ ಬಂದಿರುವ ಕವಿಗಳು ತಮ್ಮ ಭಾವನೆಗಳನ್ನು ಕವನಗಳ ಮೂಲಕ ಹಂಚಿಕೊAಡಿದ್ದಾರೆ. ಸಮಾಜದಲ್ಲಿ ಸಮಸ್ಯೆ,ಕಷ್ಟಗಳು, ತುಡಿತಗಳನ್ನು ವ್ಯಕ್ತಪಡಿಸಲು ಕವಿತೆ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಸಾಹಿತಿ ಸಂತೋಷ್ ರಚಿಸಿರುವ ನಮ್ಮ ಮಕ್ಕಳು,ನಮ್ಮ ಭವಿಷ್ಯ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ,ರೋಟರಿ ಕ್ಲಬ್ ನ ಕಾರ್ಯದರ್ಶಿ ಕೆ.ಜಿ.ಮಂಜುನಾಥ, ಕಸಾಪ ಕಾರ್ಯದರ್ಶಿ ಶ್ರೀನಿವಾಸ ಮಳಲಿ, ಕೋಶಾಧ್ಯಕ್ಷ, ಕಾರ್ಯದರ್ಶಿ ಕೆ.ಜೆ. ಅಜಯಕುಮಾರ್,ಸಿ.ಲೋಕೇಶ, ಸೌಮ್ಯ ಬಾನಾಡಿ, ದೀಪಾ, ಶೃತಿ ದೀಕ್ಷಿತ್ ಮತ್ತಿತರರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆ ಎಸ್ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಲೋಕಾಯುಕ್ತಕ್ಕೆ ನೋಟಿಸ್.!ಇವತ್ತಿಗೆ ರಾಮಾಯಣ ಚಿತ್ರ ಕಲೆಕ್ಷನ್ ಎಷ್ಟುಕೋಟಿ.!?ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಬ್ಯಾಟಿಂಗ್‌ನಲ್ಲಿ ಎಷ್ಟು ರನ್.!ಚೀನೀ ವಿಜ್ಞಾನಿಗಳು ಕೂದಲು ಉದುರುವಿಕೆ ನಿಲ್ಲಿಸಲು ವಿಶೇಷ ಬಾಚಣಿ ಅಭಿವೃದ್ಧಿ…!ವಾಮಾಚಾರಕ್ಕೆ ಮಾಟ ಮಂತ್ರ ದೂಷಕ್ಕೆ ಶತ್ರು ದೃಷ್ಟಿಗೆ ಜನ ದೃಷ್ಟಿಗೆ ದೃಷ್ಟಿಯಿಂದ ಈ ಶಕ್ತಿಶಾಲಿ ಯಂತ್ರವನ್ನು ಧಾರಣೆ ಮಾಡಿ!ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್.!ಗಾಯತ್ರಿ ಜಲಾಶಯದ ಬಳಿ ನೂತನ ಗೋಶಾಲೆ ಉದ್ಘಾಟನೆ ಜಿಲ್ಲಾಧಿಕಾರಿ ಎಸ್. ರಮ್ಯಾಬುಡಕಟ್ಟು ಜನರೊಂದಿಗೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಸಂವಾದಮಳೆನೀರು ಕೊಯ್ಲು, ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಕರೆ ರಾಜ್ಯಪಾಲ ಡಾ. ಸುಧಾ ಯಾದವ್ .!ರಾಜ್ಯ ಮಟ್ಟದ ಕವಿಗೋಷ್ಠಿ: ಅತ್ಮಾವಲೋಕನದ ಸಾಹಿತ್ಯ ಅತ್ಯಂತ ಶ್ರೇಷ್ಠ.! ಡಾ.ಬಸವಕುಮಾರ ಸ್ವಾಮೀಜಿ.!