Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಬಿಜೆಪಿ ಮಾಜಿ ಸಂಸದ ಬೋಧಸಿಂಗ್ ಭಗತ್ ಕಾಂಗ್ರೆಸ್ ಸೇರ್ಪಡೆ

0

ಭೋಪಾಲ್: ಮಹಾಕೋಶಲ್ ಪ್ರದೇಶದಲ್ಲಿ ಬಾಲಘಾಟ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಮಾಜಿ ಸಂಸದ ಬೋಧಸಿಂಗ್ ಭಗತ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಗೆದ್ದಿದ್ದ ಭಗತ್, 2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ 47 ಸಾವಿರ ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು.

ಇನ್ನು ಬಿಜೆಪಿಯಿಂದ ಮಾಜಿ ಸಚಿವ ಧಲ್ ಸಿಂಗ್ ಬಿಸೇನ್ ಗೆದ್ದಿದ್ದು, ಭಗತ್ ಅವರಿಗೆ 2019ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ಗೌರಿಶಂಕರ್ ಬಿಸೇನ್ ಕಾರಣ ಎನ್ನಲಾಗಿದೆ.

Leave A Reply

Your email address will not be published.