ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಇಬ್ಬರು ಸಾವು, ಜಪಾನಿನ ಪ್ರಜೆಗಳು ಪಾರು

ಕರಾಚಿ: ಜಪಾನ್ ಪ್ರಜೆಗಳಿದ್ದ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಸಂಭವಿಸಿದೆ.

ಉಗ್ರರ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿಮ, ವಾಹನದಲ್ಲಿದ್ದ ಎಲ್ಲಾ ಐವರು ಜಪಾನ್ ನಾಗರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಯೋತ್ಪಾದಕರಿಂದ 6 ಹ್ಯಾಂಡ್ ಗ್ರೆನೇಡ್ ಗಳು, ಒಂದು ಎಸ್‌ಎಂಜಿ ಮತ್ತು 3 ಮ್ಯಾಗಜೀನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ದಾಳಿಕೋರರ ಬ್ಯಾಗ್ ನಲ್ಲಿ ಎರಡು ಬಾಟಲ್ ಪೆಟ್ರೋಲ್ ಕೂಡ ಇತ್ತು ಎನ್ನಲಾಗಿದೆ.

Advertisement

ಜಪಾನ್ ನಾಗರಿಕರು ಕ್ಲಿಫ್ಟನ್ ನಲ್ಲಿರುವ ತಮ್ಮ ನಿವಾಸದಿಂದ ರಫ್ತು ಸಂಸ್ಕರಣಾ ವಲಯಕ್ಕೆ ಹೈಸ್ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇನ್ನು ದಾಳಿಕೋರ ತನ್ನ ಸ್ಫೋಟಕ ತುಂಬಿದ ಉಡುಪನ್ನು ಕಾರ್ಮಿಕರನ್ನು ಸಾಗಿಸುತ್ತಿದ್ದ ವ್ಯಾನ್ ಬಳಿ ಸ್ಫೋಟಿಸಿದ್ದಾನೆ ಎಂದು ವರದಿಯಾಗಿದೆ.

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement