ದಾವಣಗೆರೆ: ಸ್ಥಳೀಯ ಆರ್. ಎಲ್. ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಎನ್. ಪ್ರದೀಪ್ ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಪಿಎಚ್.ಡಿ (ಡಾಕ್ಟರೇಟ್) ಪದವಿ ಪ್ರದಾನ ಮಾಡಿದೆ.
ಪ್ರೋ. (ಡಾ.) ರತ್ನಾ ಆರ್. ಭರಮಗೌಡರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಕ್ರಿಟಿಕಲ್ ಸ್ಟಡಿ ರಿಲೇಟಿಂಗ್ ಟು ಲೀಗಲ್ ಪ್ರೇಮ್ವರ್ಕ್ ಆಫ್ ಡಿಸಾಸ್ಟರ್ ಮ್ಯಾನೇಜೆಂಟ್ ಇನ್ ಇಂಡಿಯಾ” (A Critical Study Relating to Legal Framework of Disaster Management in India) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಉನ್ನತ ಪದವಿಯನ್ನು ನೀಡಲಾಗಿದೆ ಎಂದು ಆರ್.ಎಲ್.ಕಾನೂನು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
































