ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದು ಬಾಲಕಿ ನೀರುಪಾಲು

ಹಾಸನ: ಹಾರಂಗಿ ಬಲದಂಡೆ ನಾಲೆಯಲ್ಲಿ ಕಾಲುಜಾರಿ ಬಿದ್ದು ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನ ಮಧುರನಹಳ್ಳಿಯಲ್ಲಿ ನಡೆದಿದೆ.

ರೇವಣ್ಣ ಹಾಗೂ ಭಾಗ್ಯ ದಂಪತಿಯ ಮಗಳು ಸುಪ್ರೀತಾ (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ಶುಕ್ರವಾರ ಕರ್ನಾಟಕ ಬಂದ್ ಹಿನ್ನಲೆ ಶಾಲೆಗೆ ರಜೆ ಇದ್ದದ್ದರಿಂದ ಮಕ್ಕಳೊಂದಿಗೆ ಹಾರಂಗಿ ಬಲದಂಡೆ ನಾಲೆಗೆ ಆಟವಾಡುವಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

Advertisement

ಘಟನಾ ಸ್ಥಳಕ್ಕೆ ತಾಲೂಕು ಕಚೇರಿಯ ಶಿರೆಸ್ತೇದಾರರಾದ ಸಿ.ಸ್ವಾಮಿ . ಉಪತಹಶೀಲ್ದಾರರಾದ ರವಿ ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಸಂಬಂಧ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement