ಹ್ಯಾಂಗ್ಝೌ: ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಏಶ್ಯನ್ ಗೇಮ್ಸ್ ಮಿಶ್ರ ಡಬಲ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಖಾತೆಗೆ ಇದೀಗ ಟೆನಿಸ್ನಿಂದಲೂ ಚಿನ್ನದ ಪದಕ ಬಂದು ಬಿದ್ದಿದೆ.
ಶನಿವಾರ ನಡೆದ ಫೈನಲ್ನಲ್ಲಿ ಭಾರತೀಯ ಜೋಡಿ ಚೈನೀಸ್ ತೈಪೆ ಜೋಡಿ ವಿರುದ್ಧ 2-6 6-3 (10)-(4) ಅಂತರದಲ್ಲಿ ರೋಚಕವಾಗಿ ಗೆಲುವು ಸಾಧಿಸಿತು.
ಚೈನೀಸ್ ತೈಪೆ ಜೋಡಿ ಭಾರತದ ಜೋಡಿಗೆ ತೀವ್ರ ಪೈಪೋಟಿ ನೀಡಿತ್ತಾದರೂ ಟೈ ಬ್ರೇಕರ್ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಜೋಡಿಗಳು ಚಿನ್ನದ ಪದಕಕ್ಕೆ ಕೊರಳೊಡ್ಡಿವೆ.
43 ವಯಸ್ಸಿನ ರೋಹನ್ ಬೋಪಣ್ಣ ಅವರಿಗೆ ಇದು ಕೊನೆಯ ಏಷ್ಯನ್ ಗೇಮ್ಸ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ಭಾರತದ ಈ ಟೆನಿಸ್ ಲೆಜೆಂಡ್ ಚಿನ್ನದ ಪದಕದೊಂದಿಗೆ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ ಎಂತಲೇ ಹೇಳಲಾಗುತ್ತಿದೆ ಬೋಪಣ್ಣ ಇತ್ತೀಚೆಗಷ್ಟೇ ತಮ್ಮ ಕೊನೆಯ ಡೇವಿಸ್ ಕಪ್ ಅನ್ನು ಆಡಿದ್ದರು.