ಮೈಸೂರು :ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇ ನೂ ನಾವು ಮಾಡಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಟಿಡಿ ಹಾಗೂ ಅವರ ಪುತ್ರನನ್ನು ಬಂಧಿಸಲು ಸಿದ್ಧತೆಯಾಗಿತ್ತು. ಅದನ್ನುಎಚ್.ಡಿ.ಕುಮಾರಸ್ವಾಮಿ ತಪ್ಪಿಸಿದ್ದರು. ಇಲ್ಲದಿದ್ದರೆ ಜಿಟಿಡಿ ಮಗನ ಜೊತೆ ಜೈ ಲಿನಲ್ಲಿರಬೇಕಿತ್ತು ಎಂಬ ಶಾಸಕ ಎಚ್.ಡಿ. ರೇ ವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
ನನ್ನ ವಿರುದ್ಧ ಆ ಹೇಳಿಕೆ ನೀಡಿದ್ದೇಕೆ ಎಂದು ರೇವಣ್ಣ ಅವರನ್ನು ಬೆಳಗಾವಿ ಅಧಿವೇಶನಕ್ಕೆ ಬಂದಾಗ ನೇರವಾಗಿ ಕೇಳುತ್ತೇನೆ ಎಂದರು.
ನಾನು ಮಾಧ್ಯಮಗಳಿಂದ ದೂರವಿದ್ದೇನೆ ಏನನ್ನೂ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ. ಆದರೂ ಪದೇ ಪದೇ ನನ್ನ ಹೆಸರನ್ನೇಕೆ ತೆಗೆಯುತ್ತಾರೆ? ನನ್ನ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿಲ್ಲ ಎಂದರು.